ಹೊಸದಿಗಂತ ಆನ್ಲೈನ್ ಡೆಸ್ಕ್:
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವಿಗೆ ಕಾರಣ ಯಾರು ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಜಯಲಲಿತಾ ಅವರ ಸಾವಿಗೆ ಡಿಎಂಕೆ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ದಿ. ಎಂ. ಕರುಣಾನಿಧಿ ಮತ್ತು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರ ಮೇಲೆ ತಪ್ಪು ಆರೋಪ ಹೊರಿಸಲಾಯಿತು. 2015 ರಲ್ಲಿ ಎಲ್ಲ ಆರೋಪಗಳಿಂದ ಅವರು ಖುಲಾಸೆಗೊಂಡರು. ಆದರೆ ಅದರ ವಿರುದ್ಧ ಡಿಎಂಕೆ ಮೇಲ್ಮನವಿ ಸಲ್ಲಿಸಿದ್ದರು. ಇದರಿಂದ ಜಯಲಲಿತಾ ಅವರು ಖಿನ್ನತೆಗೆ ಒಳಗಾಗಿದ್ದರು ಎಂದಿದ್ದಾರೆ. ಅಮ್ಮನ ಸಾವಿಗೆ ಕಾರಣರಾದವರಿಗೆ ದೇವರೇ ಶಿಕ್ಷೆ ನೀಡುತ್ತಾರೆ. ಅವರ ಸಾವಿಗೆ ಯಾರು ಹೊಣೆ ಎನ್ನುವುದು ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ. ಅಮ್ಮನ ಆತ್ಮ ಅವರಿಗೆ ಶಿಕ್ಷೆ ನೀಡಿಯೇ ನೀಡುತ್ತದೆ ಎಂದಿದ್ದಾರೆ.