ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸಲಿವೆ ಈ ಎರಡು ಆಹಾರ ಪದಾರ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಅದು ದೀರ್ಘಕಾಲದ ಕಾಯಿಲೆ ಮಟ್ಟವನ್ನು ಹೆಚ್ಚಿಸುತ್ತದೆ ಜತೆಗೆ ಅಕಾಲಿಕ ಮರಣದ ಅಪಾಯವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಘಟನೆ ವರದಿಯಲ್ಲಿ ಉಲ್ಲೇಖವಾಗಿದೆ.

ಚಿಪ್ಸ್ ಹಾಗೂ ನೂಡಲ್ಸ್‌ನಂಥ ಸಂಸ್ಕರಿಸಿದ ಆಹಾರ ಸೇವನೆಯಿಂದ ನಾನಾ ಸಮಸ್ಯೆಗಳು ಎದುರಾಗಲಿವೆ. ಹೆಚ್ಚು ಉಪ್ಪು ತಿನ್ನುವವರಲ್ಲಿ ಹೃದಯದ ಕಾಯಿಲೆ, ಪಾರ್ಶ್ವವಾಯು ಹಾಗೂ ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ.

Chicken Hakka Noodles Recipe - NDTV Food

Gluten-Free Chips: Types, Brands, and Shopping Tips

2025 ರವೇಳೆಗೆ ಪ್ರಪಂಚವು ಸೋಡಿಯಂ ಸೇವನೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಜಾಗತಿಕ ಗುರಿಯನ್ನು ಸಾಧಿಸಲು ಹೊರಗುಳಿದಿದೆ. ದೇಹದಲ್ಲಿ ನೀರು ಮತ್ತು ಖನಿಜಗಳ ಸಮತೋಲನ ಕಾಪಾಡಿಕೊಳ್ಳಲು ಸೋಡಿಯಂ ಬೇಕಿದೆ. ಆದರೆ ಅದೇ ಹೆಚ್ಚಾದರೆ ಜೀವಕ್ಕೆ ಕುತ್ತು ಖಂಡಿತ.

ಉಪ್ಪು, ಫಾಸ್ಟ್‌ಫುಡ್, ಚಿಪ್ಸ್, ಸಂಸ್ಕರಿಸಿದ ತಿಂಡಿಗಳು, ಸೂಪ್, ಸಂಸ್ಕರಿಸಿದ ಮಾಂಸದ ತಿನಿಸು, ಇನ್ಸಟೆಂಟ್ ನೂಡಲ್ಸ್‌ನಲ್ಲಿ ಸೋಡಿಯಂ ಗ್ಲುಟಮೇಟ್ ಇರುತ್ತದೆ. ಈ ಪದಾರ್ಥಗಳ ಸೇವನೆ ನಿಲ್ಲಿಸಬೇಕು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!