spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಎರಡು ಪುಟ್ಟ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ ನೋಡಿ..

- Advertisement -Nitte

ಅಗ್ನಿ ಶಾಮಕದಳದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ದಿನಸಿ ಅಂಗಡಿಗೆ ಹೋಗುತ್ತಾನೆ. ಮನೆಗೆ ವಸ್ತುಗಳನ್ನು ಕೊಳ್ಳುವ ಭರದಲ್ಲಿ ಒಂದೆರಡು ಪ್ಯಾಕೆಟ್ ಕೆಳಗೆ ಬಿದ್ದು ಹೋಯ್ತು. ತಕ್ಷಣವೇ ಮಹಿಳೆಯೊಬ್ಬಳು ಓಡಿಬಂದು ಪ್ಯಾಕೆಟ್‌ಗಳನ್ನು ಎತ್ತಿಕೊಟ್ಟು ಆತನನ್ನು ಬಿಗಿಯಾಗಿ ಅಪ್ಪಿದಳು. ಗೊತ್ತಿಲ್ಲದ ಮಹಿಳೆ ಅಪ್ಪಿದ್ದಕ್ಕೆ ಆತನಿಗೆ ಮುಜುಗರವಾಯ್ತು. ನಂತರ ಮಹಿಳೆ ಮಾತನಾಡಿ, ನಿಮಗೆ ನನ್ನ ಗುರುತಿಲ್ಲ ಆದರೆ ನನ್ನ ಜೀವ ಉಳಿಸಿದ್ದು ನೀವೆ. ಆರು ವರ್ಷದ ಹಿಂದೆ ನನ್ನ ಕಾಲೇಜಿಗೆ ಬೆಂಕಿ ಬಿದ್ದಾಗ ನೀವು ನನ್ನನ್ನು ಬದುಕಿಸಿದ್ದಿರಿ ಎನ್ನುತ್ತಾಳೆ.
ನಿಮ್ಮ ಪ್ರಕಾರ ನೀವು ಮಾಡುವುದು ನಿಮ್ಮ ಕೆಲಸವಷ್ಟೇ. ಆದರೆ ಯಾವ ಕ್ಷಣದಲ್ಲಿ ಯಾವ ಕೆಲಸ ಯಾರ ಮನ ಮುಟ್ಟುತ್ತದೋ ಯಾರಿಗೆ ಗೊತ್ತು? ಆದಷ್ಟು ಒಳ್ಳೆಯದೇ ಮಾಡಿ!

Top 10 Things Firefighters Don't Want You To Know! | by Hope in the Homeland | Homeland Security | Mediumಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗನ ತಾಯಿ ತನ್ನ ಕೊನೆ ಕ್ಷಣವನ್ನು ಆಸ್ಪತ್ರೆಯ ಹಾಸಿಗೆ ಮೇಲೆ ಕಳೆಯುತ್ತಿದ್ದರು. ಮಕ್ಕಳು, ಗಂಡನನ್ನು ಕಣ್ಣೆದುರು ಒಟ್ಟಿಗೆ ನೋಡಿ ವರ್ಷಗಳೇ ಕಳೆದಿತ್ತು. ಮಕ್ಕಳು, ಗಂಡ ಎಲ್ಲರೂ ಯಾವಾಗಲೂ ಕೆಲಸದಲ್ಲೇ ಬ್ಯುಸಿ ಇರುತ್ತಿದ್ದರು. ಪ್ರಮೋಷನ್ ಎಂದು ಒದ್ದಾಡುತ್ತಿದ್ದರು. ತಾಯಿಯನ್ನು ನೋಡಲು ಎಲ್ಲರೂ ಒಟ್ಟಿಗೆ ಬಂದಾಗ ಆ ತಾಯಿಗೆ ಮಹದಾನಂದ.
ಪ್ರೀತಿ ಅಂದರೇನು ಎಂದು ಈ ಕ್ಷಣವೂ ತಿಳಿಯುತ್ತಿದ್ದೇನೆ, ಈ ರೀತಿ ಹೆಚ್ಚು ಸಮಯ ನಾವು ಒಟ್ಟಿಗೇ ಕಳೆಯಬೇಕಿತ್ತು ಅಲ್ಲವಾ? ಎಂದು ಮಕ್ಕಳನ್ನು ತಾಯಿ ಕೇಳಿ, ಕಣ್ಮುಚ್ಚಿದಳು.

ಕೆಲಸದಲ್ಲಿ ನೀವು ಮಾಡುವ ಸಾಧನೆ ಶಾಶ್ವತವಲ್ಲ, ಇಂದು ನಿಮ್ಮ ಸ್ಥಾನ ಮೇಲಿದ್ದರೆ ಮುಂದೊಂದು ದಿನ ಕೆಳಗಿಳಿಯಬಹುದು. ಆದರೆ ನಮ್ಮವರಿಗೆ ನೀಡಿದ ಸಮಯ ಎಂದಿಗೂ ಶಾಶ್ವತ. ಒಂದು ಕೆಲಸ ಹೋದರೆ ಮತ್ತೊಂದು ಕೆಲಸ ಪಡೆಯಬಹದು ಆದರೆ ಪ್ರೀತಿಪಾತ್ರರನ್ನು ಕಳೆದುಕೊಂಡರೆ?
ಆಲೋಚಿಸಿ…

Happy Family Day! - RIA Collaborative Family Lawyers

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss