spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರು ಈ ರೀತಿ ಇದ್ದರೆ ಹುಡುಗರಿಗೆ ತುಂಬಾ ಇಷ್ಟ ಆಗ್ತಾರಂತೆ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಬಂಧ ಅಂತ ಬಂದಾಗ ಅದರಲ್ಲಿ ಮಾತು, ನಗು, ಜಗಳ ಎಲ್ಲವೂ ಇರಬೇಕು. ಇದ್ಯಾವುದು ಇಲ್ಲದೆ ಖುಷಿಯಾಗಿರೋದು ಕಷ್ಟ. ಆದರೆ ಇದೇ ಮಾತು, ಜಗಳ ಹೆಚ್ಚಾಗಿ ಬಾಂಧವ್ಯ ಮುರಿದರೆ ಹೇಗೆ..ಕಪಲ್ ಲೈಫ್ ನಲ್ಲಿ ಹುಡುಗಿಯರು ಈ ರೀತಿ ಇದ್ರೆ ಹುಡುಗರಿಗೆ ತುಂಬಾ ಇಷ್ಟ ಆಗುತ್ತಂತೆ ನೋಡಿ..

ನಗ್ತಾ ಇರಿ: ಹುಡುಗಿಯರ ನಗುವಿಗೆ ಫಿದಾ ಆಗೋ ಹುಡುಗರು ಎಂದಿಗೂ ಇರ್ತಾರೆ. ಹೆಣ್ಣು ಮಕ್ಕಳು ಯಾವಾಗಲೂ ನಗ್ತಾ ಇದ್ರೆ ಹುಡುಗರಿಗೆ ತುಂಬಾ ಇಷ್ಟ ಆಗುತ್ತೆ.

ಮಕ್ಕಳಂತಿರಿ: ರಿಲೇಷನ್ ಶಿಪ್, ಮದುವೆಯಾಯ್ತು ಅಂತ ಹೇಳಿ ನಿಮ್ಮೊಳಗಿರುವ ಮಗುವನ್ನು ಕಳೆದುಕೊಳ್ಳಬೇಡಿ. ನೀವೆಷ್ಟೇ ದೊಡ್ಡವರಾದರೂ ನಿಮ್ಮ ಮಗುವಿನಂತ ಮನಸ್ಸು, ತುಂಟತನವೆಂದರೆ ಹುಡುಗರಿಗೆ ಪಂಚ ಪ್ರಾಣ.

ಸ್ನೇಹಿತರಂತಿರಿ: ಎಲ್ಲದಕ್ಕೂ ರೂಲ್ಸ್ ಮಾಡೋದು, ಸಿಟ್ಟಾಗೋದು ಮಾಡಬೇಡಿ. ಅವರ ನೋವು, ಭಾವನೆಗಳನ್ನು ಶೇರ್ ಮಾಡಿಕೊಳ್ಳಲು ಅವಕಾಶ ಕೊಡಿ. ಆದಷ್ಟು ಒಂದು ಒಳ್ಳೆ ಫ್ರೆಂಡ್ ಶಿಪ್ ಬಾಂಡ್ ಕೂಡ ರೂಪಿಸಿಕೊಳ್ಳಿ.

ಹಳೇ ನೆನಪು: ನಿಮ್ಮಿಬ್ಬರ ನಡುವೆ ಬರುವ ಜಗಳಕ್ಕೆ ಹಳೇ ನೆನಪುಗಳನ್ನು ಮತ್ತೆ ಹೆಕ್ಕಿ ತರಬೇಡಿ. ಇದು ಅವರನ್ನು ಮತ್ತಷ್ಟು ಕೋಪಗೊಳ್ಳೋಕೆ ಕಾರಣವಾಗುತ್ತೆ.

ಏನು ಬೇಕು ಹೇಳಿ: ಎಲ್ಲರೂ ಮೈಂಡ್ ರೀಡರ್ಸ್ ಆಗಿರೋದಿಲ್ಲ.. ಹಾಗಿರುವಾಗ ನಿಮಗೇನು ಬೇಕು ಅಂತ ಅವರಿಂದ ಕೇಳಿ ಪಡೆಯೋದು ಒಳ್ಳೆಯದ್ದು.

ಮಾತು ಮುರಿಯಬೇಡಿ: ಎಂದಿಗೂ ನೀವು ಮಾಡಿದ ಪ್ರಾಮಿಸ್ ಬ್ರೇಕ್ ಮಾಡಬೇಡಿ. ಇದು ಅವರ ಮನಸ್ಸಿಗೆ ಘಾಸಿ ಮಾಡುತ್ತದೆ.

ಮೌನವೇ ಪರಿಹಾರವಲ್ಲ: ಜಗಳ, ಮಾತುಕತೆ ಬಂತು ಎಂದು ಇಬ್ಬರೂ ಮಾತು ಬಿಟ್ಟು ಮೌನವಾಗಿರೋದು ಒಳ್ಳೆಯದಲ್ಲ. ಒಬ್ಬರಿಗೆ ಮತ್ತೊಬ್ಬರು ಜೊತೆಯಾಗಿ ನಡೆಯೋದೆ ಒಳ್ಳೆಯದು ಅಲ್ವಾ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss