ನೀವು ನಿಮ್ಮ ಪತ್ನಿನಾ ತುಂಬಾನೇ ಪ್ರೀತಿಸಿತ್ತೀರಾ? ಆದರೆ ಅದನ್ನ ಹೇಗೆ ಅವಳಿಗೆ ಅರ್ಥ ಮಾಡಿಸುವುದು ಗೊತ್ತಾಗ್ತಿಲ್ವ? “ನೀವು ನನ್ನ ಕೇರ್ ಮಾಡಲ್ಲ, ಮದುವೆಗೆ ಮೊದಲು ದಿನಕ್ಕೆ ನೂರು ಸಲಿ ಕಾಲ್ ಮಾಡತಿದ್ರಿ ಈಗ ಆಫೀಸಲ್ಲಿದ್ದಾಗ ಒಂದು ಸಲವು ಕಾಲ್ ಮಾಡಲ್ಲ. ನಿಮಗೆ ನನ್ನ ಮೇಲೆ ಪ್ರೀತಿ ಕಡಿಮೆ ಆಗಿದೆ” ಎಂದು ಹೆಂಡತಿ ದಿನಾ ಕಂಪ್ಲೆಂಟ್ ಮಾಡತಾಳ? ಪ್ರೀತಿ ವ್ಯಕ್ತ ಪಡಿಸೋಕೆ ದಿನಕ್ಕೆ ಮೂರು ಸಲ ʼಐ ಲವ್ ಯುʼ ಹೇಳ್ಬೇಕು ಅಂತಿಲ್ಲ. ನಿಮ್ಮ ಈ ಮಾತುಗಳು ಪತ್ನಿಗೆ ʼಐ ಲವ್ ಯುʼಗಿಂತಲೂ ಹೆಚ್ಚು. ಇನ್ಮುಂದೆ ಹೆಂಡತಿಗೆ ಈ ಮಾತುಗಳನ್ನು ಹೇಳುತ್ತಿರಿ…
- ಆ ರೊಮ್ಯಾಂಟಿಕ್ ಸಾಂಗ್ ಕೇಳ್ತಿದ್ದಾಗ ನೀನೇ ನೆನಪಾದೆ.
- ಆಫೀಸ್ ತಲುಪಿದ ಕೂಡಲೇ ಕಾಲ್ ಮಾಡು.
- ನಾನು ಆ ಸಿನಿಮಾ ನೋಡಿಲ್ಲ. ಇಬ್ಬರು ಒಟ್ಟಿಗೆ ನೋಡೋಣ ಅಂಥ.
- ಇವತ್ತು ನಾನೇ ಅಡುಗೆ ಮಾಡ್ತೀನಿ. ನೀನು ರೆಸ್ಟ್ ಮಾಡು.
- ಪರವಾಗಿಲ್ಲ ನೀನು ಮಲಗು, ನಾನೇ ಕಾಲ್ ರಿಸೀವ್ ಮಾಡುತ್ತಿನಿ.
- ನಿನ್ನ ಫೆವರೆಟ್ ರೆಸ್ಟೋರೆಂಟ್ ಇಂದ ಫುಡ್ ಆರ್ಡರ್ ಮಾಡಿದಿನಿ.
- ಲೆಟ್ಸ್ ಗೋ ಶಾಪಿಂಗ್.
- ನಿಂಗೆ ಸ್ಯಾನಿಟರಿ ನ್ಯಾಪಕಿನ್ಸ್ ತಂದಿಟ್ಟಿದಿನಿ.
- ಸಾರಿ.. ನನ್ನಿಂದನೇ ತಪ್ಪಾಗಿದ್ದು.
- ತುಂಬಾ ಚೆನ್ನಾಗಿ ಕಾಣ್ಸತಿದಿಯಾ.. ಸೆಲ್ಫಿ ತಗೋಳೊಣ್ವಾ?
- ನಿನ್ನ ಧ್ವನಿ ಕೇಳೋಕಂತಾನೇ ಕಾಲ್ ಮಾಡದೆ.
- ನಿನ್ನ ಫೋನ್ಗೆ ನಿನ್ನೆನೇ ರಿಚಾರ್ಜ್ ಮಾಡಿದಿನಿ.
- ರಿಮೋಟ್ ತಗೋ
- ಯು ಆರ್ ಸೋ ಬ್ಯುಟಿಫುಲ್