ʼವಿರಾಟ್ ಕೊಹ್ಲಿ ಫಾರ್ಮ್‌ ಗೆ ಬಂದ್ರು.. RCB ಈಗ ಡೇಂಜರಸ್‌ ತಂಡʼ ಅಂದ್ರು ಇರ್ಫಾನ್ ಪಠಾಣ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ 2021ರ ಆವೃತ್ತಿಯಲ್ಲಿ ಉತ್ತಮ ತಂಡ ಕಟ್ಟಿದ್ದ ಆರ್ಸಿಬಿ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿ ವಿರಾಟ್‌ ಫಾರ್ಮ್‌ ತಂಡಕ್ಕೆ  ದೊಡ್ಡ ತಲೆನೋವಾಗಿತ್ತು. ಹಾಗಿದ್ದರೂ, ತಂಡವಾಗಿ ಹೋರಾಡಿದ್ದ ಆರ್ಸಿಬಿ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿತ್ತು. ʼಐಪಿಎಲ್ 2023 ರ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರಿಪೂರ್ಣ ತಂಡದಂತೆ ಕಾಣುತ್ತಿದೆʼ. ವಿರಾಟ್ ಕೊಹ್ಲಿ ಅವರ ಇತ್ತೀಚಿನ ಅತ್ಯುತ್ತಮ ಫಾರ್ಮ್ ಆರ್ಸಿಬಿ ತಂಡಕ್ಕೆ ದೊಡ್ಡ ಬಲ ತಂದುಕೊಡಲಿದೆ. RCB ಟೂರ್ನಿಯ ಡೇಂಜರಸ್‌ ತಂಡವಾಗಿ ಕಾಣುತ್ತಿದೆ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗೆ ಮುಂಚಿತವಾಗಿ RCB 18 ಆಟಗಾರರನ್ನು ಉಳಿಸಿಕೊಂಡಿದೆ. ಅವರ ಬಳಿ ₹8.75 ಕೋಟಿಯಷ್ಟು ಪರ್ಸ್ ಉಳಿದಿದೆ, ಇದನ್ನು ಏಳು ಆಟಗಾರರನ್ನು (ಇಬ್ಬರು ವಿದೇಶಿ) ಖರೀದಿಸಬಹುದು. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಶೋ ‘ಗೇಮ್ ಪ್ಲಾನ್’ ನಲ್ಲಿ ಮಾತನಾಡಿದ ಪಠಾಣ್, RCB ಒಂದು ಸುಸಜ್ಜಿತ ಘಟಕವಾಗಿದೆ ಎಂದು ವಿವರಿಸಿದರು
ನನ್ನ ಮಟ್ಟಿಗೆ, RCB ಬಹುಮಟ್ಟಿಗೆ ಸೆಟಲ್‌ ಆಗಿರುವ ತಂಡವಾಗಿ ಕಾಣುತ್ತದೆ. ಅವರು ಅದ್ಭುತ ಆರಂಭಿಕರನ್ನು ಹೊಂದಿದ್ದಾರೆ. ಅವರ ಬಳಿ ಈಗ ವಿರಾಟ್ ಕೊಹ್ಲಿ ಅವರ ಫಾರ್ಮ್ ಕೂಡ ಇದೆ. ಅವರು ನಾಲ್ಕು ಬಲಿಷ್ಠ ವಿದೇಶಿ ಆಟಗಾರರನ್ನು ಹೊಂದಿದ್ದಾರೆ. ಜೊತೆಗೆ ಆಲ್ರೌಂಡರ್‌ ಗಳು ತಂಡದ ಶಕ್ತಿಯಾಗಿದ್ದಾರೆʼ ಎಂದು ಅವರು ಹೇಳಿದರು.
“ಮ್ಯಾಕ್ಸ್‌ವೆಲ್ ಮತ್ತು ಮಹಿಪಾಲ್ ಲೊಮ್ರೋರ್ ಬೌಲಿಂಗ್ ಮಾಡಬಲ್ಲರು. ಅವರು ಬೌಲಿಂಗ್ ಮಾಡಬಲ್ಲ ಬ್ಯಾಟರ್‌ಗಳು. ಹಸರಂಗ ಮತ್ತು ಶಹಬಾಜ್ ಅಹ್ಮದ್- ಅವರಿಬ್ಬರೂ ವಾಸ್ತವವಾಗಿ ಉತ್ತಮವಾಗಿ ಬ್ಯಾಟ್‌ ಮಾಡಬಲ್ಲ ಸಾಮರ್ಥ್ಯ ಉಳ್ಳವರು. ಹಾಗಾಗಿ ತಂಡದ ಆಲ್‌ರೌಂಡರ್‌ ಬಲ ಉತ್ತಮವಾಗಿದೆ. ಜೊತೆಗೆ  ಅವರು ಹ್ಯಾಜಲ್‌ವುಡ್ ಮತ್ತು ಹರ್ಷಲ್ ಪಟೇಲ್‌ ನಂತಹ ಉತ್ತಮ ವೇಗದ ಬೌಲರ್‌ಗಳನ್ನು ಹೊಂದಿದ್ದಾರೆ.”
ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಮುಂದಿನ ವರ್ಷದ ಐಪಿಎಲ್‌ಗೆ ಲಭ್ಯವಾಗಲಿದ್ದಾರೆ ಎಂಬ ಮಾಹಿತಿ ಇದೆ. ಆರ್ಸಿಬಿ ಹರಾಜಿನಲ್ಲಿ ಗುಣಮಟ್ಟದ ಸೀಮರ್ ಅನ್ನು ಪಡೆದುಕೊಂಡರೆ ತಂಡ ಮತ್ತಷ್ಟು ಅಸಾಧಾರಣರಾಗಬಹುದು” ಎಂದು ಪಠಾಣ್‌ ವಿವರಿಸಿದ್ದಾರೆ.
ಕಳೆದ ವರ್ಷ ಆಕಾಶ್ ದೀಪ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿದರು, ಅವರು ಸಾಕಷ್ಟು ಚಿಕ್ಕವರು. ಆತ ಅವಕಾಶ ಸಿಕ್ಕಾಗಲೆಲ್ಲಾ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದಾರೆ. ಆದರೆ ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವ ಒಬ್ಬ ಗುಣಮಟ್ಟದ ವೇಗದ ಬೌಲರ್ ಅನ್ನು ಹೊಂದಿದರೆ, RCB ಯ ಬೌಲಿಂಗ್‌ ವಿಭಾಗ ಇನ್ನಷ್ಟು ಘಾತಕವಾಗಿ ಕಾಣಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪಠಾಣ್.
ಬೆಂಗಳೂರು ಮೂಲದ ಫ್ರಾಂಚೈಸ್ ದೇಶೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜೊತೆಗೆ ಜೋಶ್ ಹ್ಯಾಜಲ್‌ವುಡ್‌ಗೆ ಬ್ಯಾಕ್‌ಅಪ್‌ಗಾಗಿ ಹುಡುಕುತ್ತಿದೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!