ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ, ವಜ್ರಗಳನ್ನ ಕದಿಯೋ ಕಳ್ಳರ ಬಗ್ಗೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಳ್ಳರ ಗುಂಪು ರಾತ್ರೋರಾತ್ರಿ 25 ಲಕ್ಷ ಬೆಲೆಬಾಳುವ ಡಿಸೈನರ್ ಬಟ್ಟೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಛತ್ತರ್‌ಪುರ ಪ್ರದೇಶದಲ್ಲಿರುವ ಶೋರೂಂ ನಲ್ಲಿ ಬುಧವಾರ ತಡರಾತ್ರಿ 25 ಲಕ್ಷ ರೂಪಾಯಿ ಮೌಲ್ಯದ ಡಿಸೈನರ್ ಬಟ್ಟೆಗಳನ್ನು ಕಳ್ಳರು ಕದ್ದಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತರ್‌ಪುರದ ಮುಖ್ಯ ರಸ್ತೆಯಲ್ಲಿರುವ ಡಿಸೈನರ್ ಸೋನಿಕಾ ಛಾಬ್ರಾ ಅವರ ಶೋರೂಮ್ ‘ಮಸ್ಕರಾ’ದ ಬೀಗವನ್ನು ಕಳ್ಳರಿಬ್ಬರು ಮುರಿದು ಬಟ್ಟೆಗಳನ್ನು ದೋಚಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.