ಮುರುಘಾಮಠದಲ್ಲಿ ಕಳ್ಳರ ಕೈಚಳಕ: 22 ಕೆ.ಜಿ. ತೂಕದ ಬೆಳ್ಳಿ ಪುತ್ಥಳಿ ಕಳವು!

ಹೊಸದಿಗಂತ ಚಿತ್ರದುರ್ಗ

ಮುರುಘಾಮಠದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು, 22 ಕೆಜಿ ತೂಕದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿಯನ್ನು ಕದ್ದೊಯ್ದಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಪ್ರತಿದಿನದಂತೆ ಇಂದು ಸಹ ಮುಂಜಾನೆ ಪೂಜೆಗೆ ಹೋದ ಸಮಯದಲ್ಲಿ ಪುತ್ಥಳಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಈ ಕುರಿತು ಮುರುಘಾಮಠದಲ್ಲಿ ಆಂತರಿಕ ಸಭೆ ನಡೆಸಿ ಚರ್ಚಿಸಿ, ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ದೂರು ನೀಡಿದ್ದಾರೆ.

ಮುಂಜಾನೆ ಪೂಜೆಗೆಂದು ಹೋದ ವೇಳೆ ಪುತ್ಥಳಿ ಕಳ್ಳತನವಾಗಿರುವುದು ತಿಳಿದುಬಂದಿದೆ. ಜೂ 26 ರಂದೇ ಮಠದಲ್ಲಿನ ಸಿಸಿಟಿವಿ ಕಾರ್ಯ ಸ್ಥಗಿತವಾಗಿದ್ದವು. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮಠದ ದರ್ಬಾರ್ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳ್ಳತನವಾಗಿದೆ. ಈ ಕುರಿತು ಮಠದ ಆಂತರಿಕ ಸಭೆ ಕರೆದು ವಿಚಾರಣೆ ಮಾಡಿದ್ದೇವೆ ಎಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!