SHOCKING NEWS | ಮೊಬೈಲ್ ಟವರನ್ನೇ ಕೊದ್ದೊಯ್ದ ಕಿಲಾಡಿ ಕಳ್ಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಗದು, ಚಿನ್ನ, ಬೈಕ್‌, ಕಾರು ಇನ್ನಿತರ ವಸ್ತುಗಳನ್ನು ಕದಿಯುವ ಕಳ್ಳರ ಬಗ್ಗೆ ಕೇಳಿರುತ್ತೀರಿ. ಆದರೆ, ಇತ್ತೀಚೆಗೆ ಚಾಲಾಕಿ ಕಳ್ಳರು ಏಕಾಏಕಿ ಬ್ರಿಡ್ಜ್, ರೈಲ್ವೇ ಬೋಗಿ/ಇಂಜಿನ್ ಕದಿಯುವ ಘಟನೆಗಳನ್ನು ಕೇಳುತ್ತಿದ್ದೇವೆ. ಈಗ ಅದಕ್ಕೂ ಮೀರಿದ ಕಿಲಾಡಿ ಕಳ್ಳರು ಏಕಾಏಕಿ ಸೇರಿ ಸೆಲ್ ಟವರ್ ಕದ್ದೊಯ್ದಿದ್ದಾರೆ. ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ ಮಹದೇವಪುರದ ಗೋಶಾಲಾ ರಸ್ತೆಯಲ್ಲಿ. 10 ಟನ್ ತೂಕದ 50 ಅಡಿ ಎತ್ತರದ ಟವರ್ ಕಳ್ಳತನವಾಗಿದೆ. ಆದರೆ ಒಂದೇ ರಾತ್ರಿಯಲ್ಲಿ ಕದ್ದಿಲ್ಲ, ತಿಂಗಳ ಕಾಲ ಅಗೆದು ಒಂದೆಂದೇ ವಸ್ತುವನ್ನು ತೆಗೆದುಕೊಂಡು ಹೋಗಿದ್ದಾರೆ.

ಜನರೇಟರ್ ಮತ್ತು ಬ್ಯಾಟರಿ ಬ್ಯಾಂಕ್ ಅನ್ನು ಸಹ ಒಳಗೊಂಡಿಂತೆ ಕಳ್ಳತನವಾಗಿರುವ ಸೆಲ್ ಟವರ್ ನ ಮೌಲ್ಯ 17 ಲಕ್ಷ ರೂಪಾಯಿ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಸೆಲ್ ಟವರ್ ಅನ್ನು 2009 ರಲ್ಲಿ ಸ್ಥಾಪಿಸಲಾಯಿತು. ಇದನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ನಲ್ಲಿ ಹೊಸ ಟೆಕ್ನಿಷಿಯನ್ ಬಂದಿದ್ದಾರೆ. ಈ ನಡುವೆ ಕಳ್ಳರು ಸೆಲ್ ಟವರ್ ಅನ್ನು ಕೆಡವಿ ಬಿಡಿಭಾಗಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಹೊಸ ಟೆಕ್ನಿಷಿಯನ್ ಬಂದು ನೋಡಿದಾಗ ಸೆಲ್ ಟವರ್ ಜಾಗದಲ್ಲಿ ಖಾಲಿ ಜಾಗ ಕಾಣಿಸಿಕೊಂಡಿದೆ. ಅಧಿಕಾರಿಗಳು ಕಂಪನಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೆಲ್ ಟವರ್ ಕದ್ದ ಕಳ್ಳರಿಗಾಗಿ ಜಾಲ ಬೀಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!