spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತೀರಾ? ಹಾಗಿದ್ದರೆ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

- Advertisement -Nitte

ಇತ್ತೀಚಿಗೆ ನೈಟ್ ಶಿಫ್ಟ್ ಕೆಲಸಗಳು ಸರ್ವೇ ಸಾಮಾನ್ಯವಾಗಿದೆ. ಎಲ್ಲರು ಮಲಗಿದಾಗ ನಾವು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು. ಎಲ್ಲರು ಎದ್ದಾಗ ನಾವು ಮಲಗೋದು. ಹೀಗೆ ನಿದ್ರೆ ಹಾಗೂ ದಿನಚರಿಯಲ್ಲಿ ಸಂಪೂರ್ಣ ಬದಲಾವಣೆಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ದರೆ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ

8 ಗಂಟೆಗಳ ನಿದ್ದೆ: ದೇಹಕ್ಕೆ ಅಗತ್ಯವಿರುವ 7-8ಗಂಟೆಗಳ ನಿದ್ರೆ ಕೊಡಲೇಬೇಕು. ಇಲ್ಲವಾದರೆ ನೀವು ಸೃಜನಾತ್ಮಕ ಹಾಗೂ ಪ್ರೊಡಕ್ಟಿವ್ ಆಗಿ ಕೆಲಸ ಮಾಡೋದು ಕಷ್ಟ ಆಗುತ್ತದೆ.

ರೂಟೀನ್ ಇರಲಿ: ನೀವು ನಿಮ್ಮ ಶಿಫ್ಟ್ ಗೆ ಅನುಸಾರ ಪ್ರತಿದಿನ ಮಾಡಬೇಕಾದ ದಿನನಿತ್ಯ ಕೆಲಸಗಳಿಗೆ ಒಂದು ರೂಟೀನ್ ಮಾಡಿಕೊಳ್ಳಿ. ಇದು ನಿಮ್ಮ ಆರೋಗ್ಯವನ್ನೂ ಕಾಪಾಡುತ್ತದೆ.

ಆಹಾರ: ಆದಷ್ಟು ನಿಮ್ಮ ಊಟದಲ್ಲಿ ಆರೋಗ್ಯಕರವಾಗಿರುವುದನ್ನೇ ಸೇವಿಸಿ. ನಿಮ್ಮ ಡಯಟ್ ನಲ್ಲಿ ತರಕಾರಿ, ಹಣ್ಣು, ಡೈರಿ ಪದಾರ್ಥಗಳು ಇರಲಿ.

ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ: ರಾತ್ರಿ ಎಲ್ಲಾ ಕೆಲಸ ಮಾಡಿ ಸುಸ್ತಾಗಿರುತ್ತೆ. ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ. ಬದಲಿಗೆ ಒಂದು ಲೋಟ ಹಾಲನ್ನಾದರು ಸೇವಿಸಿ.

ಸಕ್ಕರೆ ಬೇಡ: ಕೆಲಸದ ಹೊತ್ತಲ್ಲಿ ರುಚಿರುಚಿಯಾದ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಮಧುಮೇಹ ಕೂಡ ಕಾಡಬಹುದು.

ವ್ಯಾಯಾಮ: ರಾತ್ರಿ ಕೆಲಸ ಮಾಡುವುದರಿಂದ ಮುಂಜಾನೆ ವ್ಯಾಯಾಮ ಮಾಡಲು ಆಗದಿದ್ದರೂ ಸಂಜೆ 30 ನಿಮಿಷವಾದರೂ ಯೋಗ, ಧ್ಯಾನ ಮಾಡಿ.

ಸ್ನೇಹಿತರ ಜೊತೆ ಟೈಮ್: ನಿಮ್ಮ ಶಿಫ್ಟ್ ಬೇರೆಯಾದರೂ ದಿನದ ಕೆಲವು ಗಂಟೆಗಳಾದರೂ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಕಳೆಯಿರಿ. ಇದು ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss