ಪ್ರತಿದಿನ ಬೆಳಗ್ಗೆ ಎದ್ದು ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯ ಹಾಗೂ ಸಂತಸದ ಬಗ್ಗೆ ಚಿಂತೆಯೂ ಮಾಡುವುದಿಲ್ಲ. ಆದರೆ ಆರೋಗ್ಯದ ಕಡೆಗಿನ ಅಲಕ್ಷ್ಯ ನಿಮ್ಮ ಇಡೀ ದಿನವನ್ನು ಹಾಳು ಮಾಡುತ್ತದೆ. ಹಾಗಾದರೆ ದಿನಾ ಬೆಳಗ್ಗೆ ಏನು ಮಾಡಬೇಕು ಗೊತ್ತಾ?
ನೀರು ಕುಡಿಯಿರಿ: ಬೆಳಗ್ಗೆ ಎದ್ದ ಕೂಡಲೇ ಒಂದು 2 ಕ್ಲಾಸ್ ನೀರು ಕುಡಿಯುವುದರಿಂದ ನಿಮಗೆ ದಿನವಿಡೀ ಗ್ಯಾಸ್ಟ್ರಿಕ್ ಸಮಸ್ಯೆ ಆಗದಂತೆ ತಡೆಯುತ್ತದೆ.
ಸೂರ್ಯನ ಕಿರಣ: ನಿದ್ರೆಯ ಮಂಪರಿನಲ್ಲಿರುವ ನಮಗೆ ಸೂರ್ಯನ ಕಿರಣಗಳು ಸಾಕಷ್ಟು ವಿಟಮಿನ್ ಗಳನ್ನು ನೀಡುತ್ತದೆ. ಇದು ನಮ್ಮ ದಿನವನ್ನೂ ಆಯಾಸವಿಲ್ಲದೆ ಕಳೆಯುವುದಕ್ಕೆ ಸಹಾಯ ಮಾಡುತ್ತದೆ.
ಉಪಹಾರ: ಏನೇ ಒತ್ತಡವಿದ್ದರೂ ನೀವು ಉಪಹಾರ ಸೇವಿಸೋದನ್ನ ಮಾತ್ರ ಮರೆಯಬೇಡಿ ಇದರಿಂದ ನಿಮಗೆ ಮೈಗ್ರೇನ್ ಸಮಸ್ಯೆ ಹಾಗೂ ಏಕಾಗ್ರತೆಯ ಕೊರತೆ ಕಾಡುತ್ತದೆ.
ಧ್ಯಾನ: ಬೆಳಗ್ಗೆ ಒಂದು 10 ನಿಮಿಷವಾದರೂ ನಿಮ್ಮೊಂದಿಗೆ ನೀವು ಕಳೆಯಿರಿ. ಅದಕ್ಕೆ ಒಳ್ಳೆಯ ಉಪಾಯವೆಂದರೆ ಧ್ಯಾನ. ಹೌದು ಬೆಳಗ್ಗೆ ಹಾಗೂ ರಾತ್ರಿ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ಸಕಾರಾತ್ಮಕ ಚಿಂತನೆ: ನನ್ನಿಂದ ಆಗದು, ನಾನಗೆ ನಿಶಕ್ತಿ ಎನ್ನುವ ನಕಾರಾತ್ಮಕ ಚಿಂತೆಗಳನ್ನು ಬಿಟ್ಟು ಕೆಲವು ಸಕಾರಾತ್ಮಕ ಚಿಂತೆಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ.