ಹೆಣ್ಣು ಮಕ್ಕಳ ಮಾತು, ಭಾವನೆ ಅರ್ಥ ಮಾಡಿಕೊಳ್ಳೋದು ತುಂಬಾ ಕಷ್ಟ ಅಂತಾ ಎಲ್ರೂ ಹೇಳ್ತಾರೆ. ಆದರೆ ಹುಡುಗಿಯರಿಗೆ ತಮ್ಮ ಸಂಗಾತಿ ಏನೆಲ್ಲಾ ಯೋಚನೆ ಮಾಡ್ತಾತೆ, ಯಾವ ರೀತಿ ಕೇರ್ ಮಾಡ್ತಾರೆ ಅನ್ನೋದು ತುಂಬಾ ಮುಖ್ಯ ಆಗುತ್ತೆ. ಆದರೆ ಅವರ ಭಾವನೆ ಅರ್ಥ ಮಾಡಿಕೊಳ್ಳಲಾಗದೆ ಎಷ್ಟೋ ಸಲ ಬ್ರೇಕ್ ಅಪ್ ಕೂಡ ಆಗಿರುತ್ತೆ.. ಮಹಿಳೆಯರು ಹೆಚ್ಚು ಗೌರವಿಸುವ ಈ ಸಿಂಪಲ್ ವಿಚಾರಗಳು ತಿಳಿಯಿರಿ…
- ಒಂದು ಪುಟ್ಟ ಅಪ್ಪುಗೆ, ಮುತ್ತು ಅಷ್ಟೇ ಅಲ್ಲಾ ಆಗಾಗ ಅವರ ಕಡೆ ಪ್ರೀತಿಯಿಂದ ನೋಡಿದರೂ ಸಾಕು.
- ಸುಮ್ಮನೆ ಕೂಗಾಡಬೇಡಿ. ಚರ್ಚೆ ಮಾಡಿ ತಪ್ಪು-ಸರಿ ತೀರ್ಮಾನ ಮಾಡಿ.
- ಮನೆ ಕಡೆಯೂ ಸ್ವಲ್ಪ ಜವಾಬ್ದಾರಿ ಹೊಂದಿರಬೇಕು.
- ಪೀರಿಯಡ್ಸ್ ಕಾರಣ ಕೊಟ್ಟು ಮಹಿಳೆಯರನ್ನು ದೂಷಿಸಬೇಡಿ.
- ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮಾತನಾಡಬೇಡಿ. ಪಾರ್ಟಿಗೆ ರೆಡಿಯಾಗಲು ಅವರಿಗೂ ಸ್ವಲ್ಪ ಸಮಯ ಕೊಡಿ.
- ಮನೆಯ ಎಲ್ಲಾ ಕೆಲಸವನ್ನೂ ಆಕೆಯೇ ಮಾಡಬೇಕು ಅನ್ನೋದನ್ನ ಬಿಡಿ. ನೀವು ಕೆಲಸಕ್ಕೆ ಕೈ ಜೋಡಿಸಿ.
- ಊಟ, ತಿಂಡಿ ಆಯ್ತ ಅಂತ ಆಗಾಗ ಕಾಳಜಿ ಮಾಡಿ.
- ಮನೆಗೆ ನೆಂಟರು ಬಂದಾಗ ಗೌರವದಿಂದ ವರ್ತಿಸಿ.
- ಅವರ ಕೆಲಸಕ್ಕೂ ಗೌರವ ಕೊಡಿ