ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಿಲನದ ನಂತರ ನೀವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆಗೆ ಹೆಬ್ಬಾಗಿಲು!

ಮಿಲನದ ನಂತರ ಪಾರ್ಟ್‌ನರ್ ಮುಖ ನೋಡೋದು ಹೇಗೆ, ಮಾತನಾಡೋದು ಏನು? ಇಂಥಾ ಗೊಂದಲ ನಿಮಗೂ ಆಗಿರಬಹುದು. ಮುಜುಗರದಿಂದ ವಿಷಯಗಳ ಬಗ್ಗೆ ಮಾತಾಡದೇ ಇರಬಹುದು. ಆದರೆ ಮಿಲನದ ನಂತರ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಲೇ ಬೇಕು, ಕೆಲವೊಂದು ರೀತಿ ನಡೆದುಕೊಳ್ಳಲೂ ಬೇಕು.. ಇಲ್ಲವಾದರೆ ಆರೋಗ್ಯ ಸಮಸ್ಯೆ ಖಂಡಿತ.

ಸೆಕ್ಸ್ ನಂತರ ನೀವು ಈ ಕೆಲಸಗಳನ್ನು ಮಾಡಲೇಬೇಕು.. ಯಾವ ಕೆಲಸ ನೋಡಿ..

ಎಸ್‌ಟಿಡಿ ಬಗ್ಗೆ ಚರ್ಚೆ:
ಮಿಲನದ ನಂತರ ಕೆಲವೊಮ್ಮೆ ನಿಮ್ಮ ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಸೆಕ್ಸುಯಲಿ ಟ್ರಾನ್ಸ್‌ಮಿಟೆಡ್ ಡಿಸೀಸ್ ಬಂದಿರುವ ಸಾಧ್ಯತೆ ಇದೆ. ಟೆಸ್ಟ್ ಮಾಡಿಸುವ ಬಗ್ಗೆ ನಿಮ್ಮ ಪಾರ್ಟ್‌ನರ್ ಬಳಿ ಓಪನ್ ಆಗಿ ಮಾತನಾಡಿ.

ಸ್ನಾನ ಮಾಡಿ:

ಮಿಲನದ ನಂತರ ಸ್ನಾನ ಮಾಡುವುದು ಕಡ್ಡಾಯ. ನೀವು ಮಿಲನದ ವೇಳೆ ಕೆಲವೊಂದು ಲ್ಯುಬ್ರಿಕೆಂಟ್ಸ್ ಬಳಸಿರಬಹುದು. ಪ್ರೈವೇಟ್ ಪಾಟ್೯ಗಳು ಸೂಕ್ಷ್ಮವಾಗಿದ್ದು, ತಕ್ಷಣ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯವಾದ ಸ್ಟೆಪ್.

ಮೂತ್ರ ವಿಸರ್ಜನೆ:
ಮಿಲನದ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು. ಯೂರಿನರಿ ಇನ್ಫೆಕ್ಷನ್‌ಗಳಿಂದ ದೂರ ಇರೋಕೆ ಬಯಸಿದರೆ ಮಿಲನದ ನಂತರ ಮೂತ್ರ ವಿಸರ್ಜನೆ ಮಾಡಿ. ಬ್ಯಾಕ್ಟೀರಿಯಾಗಳು ದೇಹದ ಒಳ ಹೊಕ್ಕುವ ಚಾನ್ಸ್ ಕಡಿಮೆ ಮಾಡೋಕೆ ಇದೇ ಬೆಸ್ಟ್ ಸೊಲ್ಯೂಷನ್.

ನೋವಾಗಿದೆಯಾ?:
ಮಿಲನದ ವೇಳೆ ತುಂಬಾ ನೋವಾಗೋದು ಕಾಮನ್ ಅಲ್ಲ. ಹೆಚ್ಚು ನೋವಾಗುತ್ತಿದ್ದರೆ ವೈದ್ಯರ ಬಳಿ ತೆರಳಿ. ಹಾಗೇ ಬಿಟ್ಟರೆ ಇದೇ ಸಮಸ್ಯೆ ಮುಂದೆ ದೊಡ್ಡದಾಗುತ್ತದೆ.

ಡಿಸ್ಚಾರ್ಜ್ ಬಗ್ಗೆ ಗಮನ:
ಮಿಲನದ ನಂತರದ ಡಿಸ್ಚಾರ್ಜ್ ಬಗ್ಗೆ ಗಮನ ಇರಲಿ. ಇದು ಕಾಮನ್ ಆದರೆ ಡಿಸ್ಚಾರ್ಜ್‌ನ ಬಣ್ಣ, ವಾಸನೆ, ಟೆಕ್ಸ್‌ಚರ್ ಗಮನಿಸಿ. ಅಬ್‌ನಾರ್ಮಲ್ ಆದ ವಾಸನೆ ಇದ್ದು, ಗಟ್ಟಿಯಾದ ಡಿಸ್ಚಾರ್ಜ್ ಇದ್ದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss