Tuesday, June 28, 2022

Latest Posts

ಭಾರತಕ್ಕೆ ಲಗ್ಗೆಯಿಡಲಿದೆಯೇ ಮೂರನೇ ಚಂಡಮಾರುತ: ಹವಾಮಾನ ಇಲಾಖೆ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಎರಡು ಚಂಡಮಾರುತಗಳನ್ನು ಎದುರಿಸಿದ ಭಾರತಕ್ಕೆ ಇದೀಗ ಈಗ ಮೂರನೇ ಚಂಡಮಾರುತ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಸುಳಿವನ್ನು ನೀಡಿದ್ದು, ಜೂನ್ 11ರ ವೇಳೆಗೆ ಮತ್ತೊಂದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶ ನಿರ್ಮಾಣವಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಊಹಿಸಿದೆ.
ವಾಯುಮಂಡಲದಲ್ಲಿ ಈ ರೀತಿ ಕಡಿಮೆ ಒತ್ತಡದಿಂದಾಗಿ ಚಂಡಮಾರುತಗಳು ಸೃಷ್ಟಿಯಾಗಬಹುದು ಅಥವಾ ಸೃಷ್ಟಿಯಾಗದೆಯೂ ಇರಬಹುದು. ಆದರೆ ಚಂಡಮಾರುತಗಳ ಹುಟ್ಟಿಗೆ ಇದು ಮೊದಲ ಹಂತವಾಗಿರುತ್ತದೆ. ಇದು ಕಡಿಮೆ ಸಾಂದ್ರತೆಯಿರುವ ಪ್ರದೇಶಕ್ಕೆ ಗಾಳಿ ರಭಸವಾಗಿ ಧಾವಿಸುವುದರಿಂದ ಚಂಡಮಾರುತಕ್ಕೆ ಕಾರಣವಾಗುತ್ತವೆ. ಹೀಗಾಗಿ ಒಂದು ತಿಂಗಳ ಅಂತರದಲ್ಲಿ ಮೂರನೇ ಚಂಡಮಾರುತದ ಭೀತಿ ಈಗ ಭಾರತಕ್ಕೆ ಎದುರಾಗಿದೆ.
ಇದಕ್ಕೂ ಮುನ್ನ ಭಾರತದಲ್ಲಿ ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಒಂದು ವಾರದ ಅಂತರದಲ್ಲಿ ಭಾರೀ ಹಾನಿಯನ್ನು ಉಂಟು ಮಾಡಿತ್ತು.
ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಜೂನ್ 11ರ ವೇಳೆಗೆ ನಿರ್ಮಾಣವಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ನೈಋತ್ಯ ಮಾರುತಗಳು ಜೂನ್ 10 ರಿಂದ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss