Saturday, August 13, 2022

Latest Posts

ಕೊರೋನಾ ಸೋಂಕು ಇದ್ದರೂ ಶೂಟಿಂಗ್‌ಗೆ ತೆರಳಿದ ಬಾಲಿವುಡ್ ನಟ, ಎಫ್‌ಐಆರ್ ದಾಖಲು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟನ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚುತ್ತಿದ್ದು ,ಎಲ್ಲರೂ ಜಾಗರೂಕರಾಗಿರಬೇಕಿದೆ. ಇಂಥ ಸಮಯದಲ್ಲಿ ಕೊರೋನಾ ಬಾಧಿಸಿ ಕ್ವಾರೆಂಟೈನ್‌ನಲ್ಲಿ ಇದ್ದ ನಟ ಶೂಟಿಂಗ್‌ಗೆ ತೆರಳಿದ್ದಾರೆ. ಸಾಂಕ್ರಾಮಿಕ ತಡೆ ಕಾಯ್ದೆ ಅನ್ವಯ ಪೊಲೀಸರು ದೂರು ದಾಖಲಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಮುಂಬೈ ಪೊಲೀಸ್ ನಟನ ಹೆಸರು ಹೇಳದೇ ರೂಲ್ಸ್ ಬ್ರೇಕ್ ಮಾಡಿರುವ ಮಾಹಿತಿ ನೀಡಿದ್ದಾರೆ.
ಮುಂಬೈಯನ್ನು ಕೊರೋನಾದಿಂದ ದೂರ ಇಡುವುದು ನಮ್ಮ ಜವಾಬ್ದಾರಿ. ಕೊರೋನಾ ಪಾಸಿಟಿವ್ ಇರುವ ನಟ ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿ ಇರದೇ ಶೂಟಿಂಗ್‌ಗೆ ತೆರಳಿದ್ದಾರೆ. ಅದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss