ತನ್ನ ಮದುವೆಗೆ ಖುದ್ದು ತಾನೇ ಹಾಜರಾಗಿ ಅಚ್ಚರಿ ಮೂಡಿಸಿದಳು ಈ ಮದುಮಗಳು!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶೀರ್ಷಿಕೆ ಓದಿ ಗೊಂದಲಕ್ಕೆ ಬೀಳಬೇಡಿ… ಶೀರ್ಷಿಕೆ ಸರಿಯಾಗಿಯೇ ಇದೆ! ತನ್ನ ಮದುವೆಗೆ ತಾನೇ ಖುದ್ದಾಗಿ ಉಪಸ್ಥಿತಳಿರುವ ಮೂಲಕ ಕೇರಳದ ಕೊಯಮತ್ತೂರಿನಲ್ಲಿ‌ ಮುಸ್ಲಿಂ ಮದುಮಗಳೊಬ್ಬರು ಹೊಸ ಇತಿಹಾಸ ಬರೆದಿದ್ದಾರೆ.

ಮುಸ್ಲಿಂ ಸಂಪ್ರದಾಯದಲ್ಲಿ ಮದುವೆ ವಿಧಿವಿಧಾನಗಳಲ್ಲಿ ಮದುಮಗಳು ಹಾಜರಿರುವುದಿಲ್ಲ. ಇಲ್ಲಿ ಮದುವೆ ಕ್ರಮಗಳು ಮದುಮಗ, ಮದುಮಗಳ ತಂದೆಯ ನಡುವೆ ನಡೆಯುತ್ತವೆ. ಅದರೆ ಕೊಯಂಬತ್ತೂರಿನ ಮದುವೆಯಲ್ಲಿ ಒಂದಿಷ್ಟು ವಿಶೇಷತೆ ಕಂಡುಬಂತು.
ಕೆ.ಎಸ್.ಉಮ್ಮರ್ ಎಂಬವರು ತಮ್ಮ ಪ್ರೀತಿಯ ಮಗಳ ಮದುವೆಯನ್ನು ಸಂಭ್ರಮ ಪೂರ್ವಕ ನಡೆಸಲು ನಿರ್ಧರಿಸಿದ್ದರು. ಅದರಂತೆ ಸೂಕ್ತ ವರನನ್ನೂ ಹುಡುಕಿದ್ದರು.

ಇನ್ನೇನು ಮದುವೆ ನಡೆಯಲಿದೆ ಎಂದಾಗ ಈ ಶುಭ ಘಳಿಗೆಗೆ ಮಗಳು ಹಾಜರಿಲ್ಲದಿದ್ದರೆ ಹೇಗೆ ಎಂಬ ನೋವು ಅವರನ್ನು ಕಾಡಿತ್ತು. ಸಂಪ್ರದಾಯ ಮುಖ್ಯವಾ, ಭಾವನೆ ಮುಖ್ಯವಾ ಎಂಬ ಜಿಜ್ಞಾಸೆ ಬಳಿಕ ಅವರು ಗಟ್ಟಿ ಮನಸ್ಸು‌ ಮಾಡಿ ಆಕೆಯ ಉಪಸ್ಥಿತಿಯಲ್ಲೇ ಮದುವೆ ನೆರವೇರಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಮಗಳು ಮಾತ್ರವಲ್ಲ, ಎಲ್ಲಾ ವಧುಗಳಿಗೆ ಅವರ ಮದುವೆಗೆ ಸಾಕ್ಷಿಯಾಗುವ ಹಕ್ಕಿದೆ ಎಂದಿದ್ದಾರೆ.
ಅಂದಹಾಗೆ ಈ ಹೊಸ ಬೆಳವಣಿಗೆ ಬೆನ್ನಿಗೇ ಪರ ವಿರೋಧ ಚರ್ಚೆಗಳೂ ಸಹಜವಾಗಿಯೇ ಆರಂಭಗೊಂಡಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!