spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಹೆರಿಗೆ ಖರ್ಚೆಲ್ಲಾ ವೈದ್ಯರದ್ದೇ!

- Advertisement -Nitte
  • ಕಾವ್ಯಾ ಜಕ್ಕೊಳ್ಳಿ

ವೈದ್ಯ ಹಾಗೂ ರೋಗಿಗಳ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿರುವ ಈ ಕಾಲದಲ್ಲಿಯೂ ಅಲ್ಲೆಲ್ಲೋ ‘ವೈದ್ಯೊ ನಾರಾಯಣೋ ಹರಿಃ’ ಎಂಬ ವ್ಯಾಕ್ಯ ಮೊಳಗುತ್ತಿದೆ. ಸತ್ತ ದೇಹಕ್ಕೆ ಚಿಕಿತ್ಸೆ ನೀಡಿ ಜೇಬು ಬರಿದು ಮಾಡುವಂತಹ ವೈದ್ಯರ ಸಂಖ್ಯೆಯೇ ಹೆಚ್ಚುತ್ತಿರುವ ಈ ಸಮಯದಲ್ಲಿ, ಒಂದು ಪೈಸೆಯೂ ತೆಗದುಕೊಳ್ಳದೆ ಹೆರಿಗೆ ಮಾಡಿಸುವ ಡಾಕ್ಟರೊಬ್ಬರಿದ್ದಾರೆ ಎಂದರೆ ನಂಬ್ತೀರಾ?

ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ. ಈ ಕಲಿಯುಗದ ನಾರಾಯಣನ ಹೆಸರು ಡಾ. ಗಣೇಶ್ ರಾಖಾ, ಮುಂಬೈನ ಪುಣೆಯವರು. ಇವರು ತಮ್ಮ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದು ರೂಪಾಯಿಯೂ ತೆಗೆದುಕೊಳ್ಳುವುದಿಲ್ಲ. ಇಲ್ಲಿಯವರೆಗೆ ಸುಮಾರು  ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿದ್ದಾರೆ.

ಗಣೇಶ್ ಅವರು 2007ರಲ್ಲಿ ಪುಣೆಯ ಹಡಪ್ಪರ್ ಉಪನಗರದಲ್ಲಿ 25  ಹಾಸಿಗೆಗಳ ಸಾಮರ್ಥ್ಯದ ಜನರಲ್ ಮೆಡಿಕೇರ್ ಮತ್ತು ಹೆರಿಗೆ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಬಡವರಿ ಅತಿ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದಲೇ ಈ ಆಸ್ಪತ್ರೆಯನ್ನು ತೆರೆದಿದ್ದರು.

ಗಣೇಶ್ ಅವರು ಹೆರಿಗಾಗಿ ಬರುವ ಮಹಿಳೆಯರು ಮತ್ತು ಕುಟುಂದವರ ವರ್ತನೆ ಗಮನಿಸುತ್ತಿದ್ದರು. ಕೆಲವರು ಗಂಡು ಮಗು ಹುಟ್ಟಿದರೆ ಆಸ್ಪತ್ರೆ ಸಿಬ್ಬಂದಿಗೆಲ್ಲ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಅದೇ ಹೆಣ್ಣು ಮಗು ಹುಟ್ಟಿದರೆ ಅನಿಷ್ಠ ಎಂದು ಶಪಿಸುತ್ತಿದ್ದರಂತೆ. ಅದರಲ್ಲೂ ಕೆಲವರಂತು ಹುಟ್ಟಿದ್ದು ಹೆಣ್ಣು ಮಗು, ಮುಂದೆ ನಮಗೆ ತುಂಬಾ ಖರ್ಚಿದೆ. ಫೀಸ್ ಕಡಿಮೆ ಮಾಡಿ ಎನ್ನುತ್ತಿದ್ದರಂತೆ.

ಎರಡನೇ ಮಗು ಕೂಡ ಹೆಣ್ಣೇ ಹುಟ್ಟಿತೆಂಬ ಕಾರಣಕ್ಕೆ ಸುಮಾರು 14ತಾಯಂದಿರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರಂತೆ. ಇವೆಲ್ಲವನ್ನೂ ಗಣೇಶ್ ಅವರು ಅತಿ ಹತ್ತಿರದಿಂದ ನೋಡಿದ್ದರು.
ಆಗಲೇ ಈ ನಿರ್ಧಾರಕ್ಕೆ ಬಂದಿದ್ದು. ‘ತಮ್ಮ ಗ್ರಾಮದಲ್ಲಿ ಹೆಣ್ಣು ಶಿಶು ಹತ್ಯೆಯನ್ನು ತಡೆಯಬೇಕು, ನಮ್ಮ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಯಾವುದೇ ಶುಲ್ಕ ತೆಗೆದುಕೊಳ್ಳಬಾರದೆಂದು’. ಅದರಂತೆಯೇ ನಡೆದುಕೊಂಡರು. ನಾರ್ಮಲ್ ಅಲ್ಲದೇ, ಸಿಸರಿನ್ ಮೂಲಕ ಹೆಣ್ಣು ಮಗು ಹುಟ್ಟಿದರು ಕೂಡ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ತಾವೇ ಕೇಕ್, ಸ್ವೀಟ್ ತರಿಸಿ ಇಡೀ ಆಸ್ಪತ್ರೆಗೆ ಹಂಚುತ್ತಾರೆ.

‘ನನಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಹೊರೆಯಲ್ಲ ಅದೊಂದು ಶಕ್ತಿ’ ಎನ್ನುತ್ತಾರೆ ಗಣೇಶ್ ರಾಖಾ.


ಗಣೇಶ್ ಅವರ ಈ ಅದ್ಭುತ ಕಾರ್ಯದ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ಇದನ್ನು ಓದಿ ನೂರಾರು ಡಾಕ್ಟರ‍್ಸ್ ಇವರನ್ನು ಸಂಪರ್ಕ ಮಾಡಿದರು. ತಾವು ಕೂಡ ಲಿಂಗ ಪತ್ತೆ ಪರೀಕ್ಷೆ ಮತ್ತು ಗರ್ಭಪಾತ ನಿಲ್ಲಿಸುವುದಾಗಿ ಭರವಸೆ ನೀಡಿದರೆ.

ಈಗ ಮಹಾರಾಷ್ಟ್ರದಲ್ಲಿ ಮೂರು ಸಾವಿರ ವೈದ್ಯರು ಗಣೇಶ್ ಅವರ ಬೆಂಬಲಕ್ಕೆ ನಿಂತಿದ್ದು, ದೇಶದೆಲ್ಲೆಡೆ 17 ಸಾವಿರ ವೈದ್ಯರು ಗಣೇಶ್ ಅವರ ಹಾದಿಗೆ ಜೊತೆಯಾಗಿದ್ದಾರೆ. ಹೆಣ್ಣು ಹೆರುವ ತಾಯಿಗೆ ಬೆಂಬಲವಾಗಿದ್ದಾರೆ.

ಅಮ್ಮನ ಮಾತೇ ಸ್ಫೂರ್ತಿಯಾಯ್ತು..
ಗಣೇಶ್ ಅವರು ಒಬ್ಬ ಬಡ ರೈತನ ಮಗ. ಇವರಿಗೆ ಬಾಲ್ಯದಲ್ಲಿದ್ದಾಗ ಕುಸ್ತಿಪಟುವಾಗಬೇಕೆಂಬ ಆಸೆ ಇತ್ತಂತೆ. ಆದರೆ ತಾಯಿಗೆ ಇದು ಇಷ್ಟವಿರಲಿಲ್ಲವಂತೆ. ಕುಸ್ತಿಪಟುವಾದರೆ ನಿನಗೆ ಕುಟಂಬದವರ ಹೊಟ್ಟೆಹೊರೆಯಲು ಆಗುವುದಿಲ್ಲ. ನಿನಗೇ ಮನೆಯವರೆಲ್ಲರ ಅನ್ನ ಬೇಕಾಗುತ್ತದೆ ಎಂದರಂತೆ. ಇದೇ ಮಾತನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ವೈದ್ಯಕೀಯ ಹಾದಿ ಹಿಡಿದರಂತೆ.

ಹೆಣ್ಣಿನ ವಿಷಯದಲ್ಲಿ ದೇಶ ಬದಲಾಗಿ, ಹಾಗೆಯೇ ಮನಸ್ಥಿತಿಗಳು ಕೂಡ ಬದಲಾಗಿದೆ ಎಂದಕೊಂಡರೂ ಕೆಲವು ಕಡೆ ಲಿಂಗ ತಾರತಮ್ಯ ತಾಂಡವವಾಡುತ್ತಿದೆ. ಇಂದಿಗೂ ಹೆಣ್ಣು ಎಂದರೆ ಹೊರೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಗಣೇಶ್ ರಾಖಾ ಅವರಂತಹ ಮಹತ್ ಕಾರ್ಯಗಳು ಲಿಂಗ ತಾರತಮ್ಯದ ನೆಲಸಮಕ್ಕೆ ನಾಂದಿಯಾಗಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss