spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಟ್ಟು ಟಿ-20 ಸೆಮಿಫೈನಲ್ಸ್ ಫೀಲ್ಡಿಂಗ್ ಮಾಡಿದೆ ಈ ಶ್ವಾನ: ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ವಿಡಿಯೋ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕ್ರಿಕೆಟ್ ಪಂದ್ಯದ ವೇಳೆ ಎಲ್ಲರಿಗೂ ಎಲ್ಲಿಲ್ಲದ ಉತ್ಸಾರ, ಈ ವೇಳೆ ಮೈದಾನದಲ್ಲಿ ನಾನಾ ರೀತಿಯ ಅವಾಂತರಗಳನ್ನು ಕಂಡಿದ್ದೇವೆ, ಆದರೆ ಐರ್ಲೆಂಡ್ ನಲ್ಲಿ ನಡೆದ ಮಹಿಳಾ ಟಿ 20 ಸೆಮಿಫೈನಲ್ಸ್ ನಲ್ಲಿ ಪುಟ್ಟ ಶ್ವಾನವೊಂದು ಮೈದಾನಕ್ಕಿಳಿದು ಸಖತ್ ಫೀಲ್ಡಿಂಗ್ ಮಾಡಿದೆ.
ನಿಜಾ ಕಣ್ರೀ.. ಈ ಘಟನೆ ಉತ್ತರ ಐರ್ಲೆಂಡಿನ ಮಗೇರಮೆಸಾನ್​ನಲ್ಲಿರುವ ಬ್ರೆಡಿ ಕ್ರಿಕೆಟ್​ ಕ್ಲಬ್​ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್​ಎನ್​ಐ ಮಹಿಳಾ ತಂಡಗಳ ನಡುವೆ ಆಲ್​ ಐರ್ಲೆಂಡ್​ ಟಿ20 ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ್ತಿ ಚೆಂಡನ್ನು ಆಫ್ ಸೈಡ್ ಹೊಡೆದಿದ್ದಾರೆ. ಈ ಚೆಂಡನ್ನು ಫೀಲ್ಡರ್ ಹಿಡಿದು ವಿಕೆಟ್ ಕೀಪರ್ ಬಳಿ ಎಸೆದಿದ್ದಾರೆ. ವಿಕೆಟ್ ಕೀಪರ್ ಅದನ್ನು ವಿಕೆಟ್ ಗೆ ಗುರಿ ಇಟ್ಟರೂ ಕೂಡ ಚಂಡು ಬೇರೆಡೆ ಹೋಗಿ ಬಿತ್ತು. ಇದೇ ಸಮಯಕ್ಕೆ ಸರಿಯಾಗ ಬಂದ ಶ್ವಾನವೊಂದು ಆ ಚಂಡನ್ನು ತನ್ನ ಬಾಯಿಯಲ್ಲಿ ಹಿಡಿದು ಆಟ ಆಡಿಸಿದೆ. ಮೈದಾನವೆಲ್ಲಾ ಸುತ್ತಿ ಕೊನೆಗೆ ಅದು ಅಯೋಫೆ ಫಿಶರ್, ನಾನ್ ಸ್ಟ್ರೈಕರ್ ಬಳಿ ಬಂದು ನಿಂತು ಚಂಡನ್ನು ನೀಡಿದೆ.
ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss