spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಳಿದ ಪಳಿದ ಬಟ್ಟೆಗಳಿಂದಲೇ ತಯಾರಾಗಿದೆ ಈ ಎಕೋ ಫ್ರೆಂಡ್ಲಿ ಫ್ಯಾಷನ್ ಬ್ರಾಂಡ್!

- Advertisement -Nitte

ಮೇಘನಾ ಶೆಟ್ಟಿ, ಶಿವಮೊಗ್ಗ

ಹೀರೋಯಿನ್‌ಗಳು, ಮಾಡೆಲ್‌ಗಳು ಏನು ಹಾಕಿದ್ರೂ ಅದು ಈಗ ಫ್ಯಾಷನ್!
ಅದೇ ರೀತಿ ಬಟ್ಟೆಯನ್ನು ಬಟ್ಟೆ ಅಂಗಡಿಯವರು ತೋರಿಸಿದಾಗ ಚೆನ್ನಾಗಿಲ್ಲ ಎಂದು ಮೂಗು ಮುರಿದು ಬಂದಿರುತ್ತೇವೆ. ಅದನ್ನೇ ಯಾರಾದರೂ ಹೀರೋಯಿನ್ ಮನೆಯಲ್ಲಿ ಹಾಕಿಕೊಂಡಿದ್ದರೂ ಸಾಕು, ಅಂತಹ ಬಟ್ಟೆ ನಮಗೂ ಬೇಕು. ಅದರಲ್ಲೂ ಹೊಸ ಬ್ರಾಂಡ್‌ನ ಬಟ್ಟೆ ದೊಡ್ಡ ಮಂದಿ ಹಾಕಿದರೆ ಅದು ಕೈ ತಲುಪುವ ತನಕ ಸಮಾಧಾನವೇ ಇರದು.
ಬಟ್ಟೆಗಳ ಬಗ್ಗೆ ಇಷ್ಟೊಂದೆಲ್ಲಾ ಮಾತನಾಡುತ್ತಿರೋದಕ್ಕೂ ಕಾರಣ ಇದೆ.. ಇಂದು ಉಳಿದ ಪಳಿದ ಬಟ್ಟೆಗಳಿಂದ ಇನ್ನೊಂದು ರೀತಿ ಬಟ್ಟೆ ತಯಾರಿಸುವ ಎಕೋ ಫ್ರೆಂಡ್ಲಿ ಕಂಪನಿಯೊಂದು ಫೇಮಸ್ ಆಗಿದೆ.
ಉಳಿದ ಬಟ್ಟೆಗಳನ್ನು ಪ್ಯಾಚ್ ಮಾಡಿ ವಿಭಿನ್ನವಾಗಿ ಬಟ್ಟೆ ತಯಾರಿಸುವ ಕಂಪನಿ ‘ಡೋಡ್ಲೇಜ್- ಎಕೋ ಫ್ಯಾಷನ್ ಹೌಸ್’

Contact Us – Doodlageದೆಹಲಿಯಲ್ಲಿ ಈ ಫ್ಯಾಷನ್ ಹೌಸ್‌ನನ್ನು ನೀವು ಕಾಣಬಹುದು. ಇಲ್ಲಿ ಯಾವ ಉಳಿದ ಬಟ್ಟೆಯನ್ನೂ ವೇಸ್ಟ್ ಮಾಡೋದಿಲ್ಲ. ಎಲ್ಲವನ್ನೂ ರೀ ಯೂಸ್ ಮಾಡುವ ಮಂತ್ರ ಇವರದ್ದು.

ಕಾರ್ಬನ್ ಎಮಿಷನ್: ಫ್ಯಾಷನ್ ಇಂಡಸ್ಟ್ರಿಯಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಅನ್ನೋದು ತಪ್ಪು, ಶೇ.8 ರಷ್ಟು ಕಾರ್ಬನ್ ಎಮಿಷನ್ ಫ್ಯಾಷನ್ ಇಂಡಸ್ಟ್ರಿಯಿಂದ ಆಗುತ್ತದೆ. ಪರಿಸರಕ್ಕೆ ಆದಷ್ಟು ಕಡಿಮೆ ಹಾನಿ ಆಗುವಂತೆ ಬಟ್ಟೆಗಳನ್ನು ತಯಾರಿಸುವ ಐಡಿಯಾ ಈ ಕಂಪನಿಯದ್ದು.

Ever wondered what happens to your clothes after you discard them? | VOGUE  India | Vogue Indiaಕಟ್ ಪೀಸ್ ಬಟ್ಟೆ ಕಲೆಕ್ಷನ್: ಅಕ್ಷರಷಃ ಈ ಕಂಪನಿಯಲ್ಲಿ ಹೊಸ ಬಟ್ಟೆಗಳಿಂದ ಹೊಲಿದು ಡಿಸೈನ್ ಮಾಡುವುದಿಲ್ಲ. ಟೆಕ್ಸ್‌ಟೈಲ್‌ನಲ್ಲಿ ಉಳಿದ ಕಟ್‌ಪೀಸ್‌ಗಳು, ಬಟ್ಟೆ ಅಂಗಡಿಗಳಲ್ಲಿ ಬೇಡವೆಂದು ಬಿಸಾಡಿದ ಬಟ್ಟೆಗಳು, ಟೈಲರ್‌ಗಳ ಬಳಿ ಉಳಿದ ಪೀಸ್‌ಗಳು ಹಾಗೂ ಕಲೆ, ಫ್ಯಾಬ್ರಿಕ್ ಹಾಳಾಗಿ ರಿಜೆಕ್ಟ್ ಆದ ಪೀಸ್‌ಗಳನ್ನು ಇವರು ಕೊಳ್ಳುತ್ತಾರೆ.

The Power Of One | Forbes Indiaವೇಸ್ಟ್ ಮಾಡೋದಿಲ್ಲ: ಸಾಮಾನ್ಯವಾಗಿ ಬಟ್ಟೆ ಹೊಲಿಯುವಾಗ ಸ್ವಲ್ಪವಾದರೂ ಬಟ್ಟೆ ವೇಸ್ಟ್ ಆಗಿಯೇ ಆಗುತ್ತದೆ. ಆದರೆ ಈ ಕಂಪನಿಯಲ್ಲಿ ಆದಷ್ಟು ಕಡಿಮೆ ವೇಸ್ಟೇಜ್ ಬರುವಂತೆ ಬಟ್ಟೆಗಳ ಡಿಸೈನ್ ಮಾಡಲಾಗುತ್ತದೆ. ದೊಡ್ಡ ಕಂಪನಿಗಳು ಒಂದು ಮಟ್ಟಕ್ಕೆ ಬಟ್ಟೆಗಳನ್ನು ರೀಸೈಕಲ್ ಮಾಡುತ್ತವೆ. ಆದರೆ ಮಧ್ಯಮ ಹಾಗೂ ಚಿಕ್ಕ ಕಂಪನಿಗಳು ಬಟ್ಟೆ ವೇಸ್ಟ್‌ನನ್ನು ಕಸಕ್ಕೆ ಎಸೆಯುತ್ತಾರೆ ಅಥವಾ ಸುಡುತ್ತಾರೆ. ಎಸೆದ ಈ ಬಟ್ಟೆಗಳು ಕೊಳೆತು ಹೋಗೋಕೆ 200 ವರ್ಷಗಳೇ ಬೇಕು.

polyester cloth WASTE, Application : Industrial, Oil Cleaning by RIGHT  LINKS IMPORT AND EXPORT from Thoothukudi Tamil Nadu | ID - 4638334ಇದು ನಾರ್ಮಲ್ ಫ್ಯಾಷನ್ ಅಲ್ಲ, ಉಳಿದ ಬಟ್ಟೆಯಲ್ಲಿ ಮಾಡೋ ಫ್ಯಾಷನ್. ಇದನ್ನು ಜನ ಈಗಾಗಲೇ ಒಪ್ಪಿದ್ದಾರೆ. ಜಗತ್ತಿಗೆ ಆದಷ್ಟು ಕಡಿಮೆ ಹಾನಿ ಮಾಡುವ ಉದ್ದೇಶಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ ಎಂದು ಡೂಡ್ಲರ್‌ನ ಸಂಸ್ಥಾಪಕಿ ಕ್ರಿತಿ ತುಲಾ ಹೇಳುತ್ತಾರೆ.

The Best of Eco India (and a brand new season). ಫ್ಯಾಷನ್ ಅನ್ನೋದು ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡುವಂತದ್ದಲ್ಲ, ನಮ್ಮ ಕಂಫರ್ಟ್ ನಮ್ಮ ಫ್ಯಾಷನ್. ಪರಿಸರಕ್ಕೆ ನಮ್ಮಿಂದ ಹಾನಿಯಾಗೋದನ್ನು ತಡೆಯೋದಕ್ಕೆ ಸಣ್ಣ ಬದಲಾವಣೆ ಮಾಡೋದ್ರಲ್ಲಿ ತಪ್ಪಿಲ್ಲ!

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss