ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿರುಕು ಬಿಟ್ಟ ಗೋಡೆ ನಡುವೆ ದಿನ ಕಳೆಯುತ್ತಿದೆ ಈ ಕುಟುಂಬ: ನಾಗಮ್ಮಜ್ಜಿಗೊಂದು ಮನೆ ಬೇಕು..

ಹೊಸ ದಿಗಂತ ವರದಿ, ಮಂಗಳೂರು:

ವಸತಿ ಯೋಜನೆಗಳಡಿಯಲ್ಲಿ ಪ್ರತಿ ವರ್ಷ ಸಾವಿರಾರು ಮನೆಗಳು ಬಡವರಿಗಾಗಿ ಮಂಜೂರಾಗುತ್ತವೆ. ಆದರೆ ಹಲವು ಸಮಸ್ಯೆಗಳಿಂದಾಗಿ ಇನ್ನೂ ಮನೆಗಳೇ ಇಲ್ಲದೆ, ಗುಡಿಸಲುಗಳಲ್ಲಿ ವಾಸವಿರುವ ಕುಟುಂಬಗಳೂ ಅದೆಷ್ಟೋ ಇವೆ. ಇವುಗಳ ಪೈಕಿ ಈ ಮನೆಯೂ ಒಂದು. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಾಯ ಗುಡ್ಡೆಯಲ್ಲಿ ಈ ಮನೆಯಿದೆ.

ನಾಗಮ್ಮಜ್ಜಿಯ ಮನೆಯೆಂದೇ ಈ ಮನೆ ಗುರುತಿಸಿಕೊಂಡಿದೆ. ಬಿರುಕು ಬಿಟ್ಟಿರುವ ಗೋಡೆ ಆಗಲೋ ಈಗಲೋ ಬೀಳುವ ಹಂತದಲ್ಲಿದೆ. ಇನ್ನು ಛಾವಣಿಯ ಕಥೆಯಂತೂ ಇದಕ್ಕೆ ಹೊರತಾಗಿಲ್ಲ. ಪ್ಲಾಸ್ಟಿಕ್ ಸುತ್ತಿಕೊಂಡು ಹಲವು ಮಳೆಗಾಲ ವನ್ನೂ ಕಳೆದಾಗಿದೆ. ಈ ಬಾರಿಯ ಮಳೆಗಾಲವನ್ನು ಎದುರಿಸುವುದೇ ಕಷ್ಟಕರವಾದ ಸ್ಥಿತಿಯಿದೆ. ಐದು ಮಂದಿ ಹಿರಿ ಜೀವಗಳು ಈ ಮುರುಕಲು ಮನೆಯಲ್ಲಿ ದಿನಕಳೆಯುತ್ತಿವೆ.

ಮನೆಯ ಸೊಸೆ ಬೀಡಿ ಕಟ್ಟಿ ಬರುವ ಆದಾಯ ಮನೆಯ ನಿತ್ಯ ಖರ್ಚಿಗೆ ಸಾಲುತ್ತಿಲ್ಲ. ಇಬ್ಬರು ಮಕ್ಕಳ ವಿದ್ಯಾಭ್ಯಾಸದೊಂದಿಗೆ ಕುಟುಂಬ ನಿಭಾಯಿಸುವುದೇ ಕಷ್ಟವಾಗಿರುವಾಗ ಮನೆ ದುರಸ್ತಿ ಮಾಡುವುದಾದರೂ ಹೇಗೆ? ಎನ್ನುವ ಚಿಂತೆಯಲ್ಲಿಯೇ ಕಳೆದ ಹಲವಾರು ವರ್ಷಗಳಿಂದ ಈ ಬಿರುಕು ಬಿಟ್ಟ ಅಪಾಯಕಾರಿ ಮನೆಯಲ್ಲಿ ಈ ಬಡ ಕುಟುಂಬ ದಿನ ಕಳೆಯುತ್ತಿದೆ.

ಶೌಚಾಲಯದ ಒಂದು ಪಾರ್ಶ್ವದ ಗೋಡೆ ಈ ಹಿಂದೆಯೇ ಕುಸಿದು ಬಿದ್ದಿದೆ. ಮೊನ್ನೆಯ ಮಳೆಗೆ ಇನ್ನೊಂದು ಪಾರ್ಶ್ವದ ಗೋಡೆ ವಾಲಿ ನಿಂತಿದೆ. ಸದ್ಯಕ್ಕೆ ಟರ್ಪಾಲು ಸುತ್ತಿ ತಾತ್ಕಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಬಿರುಕು ಬಿಟ್ಟ ಗೋಡೆಗಳು ಧರಶಾಹಿಯಾಗಲು ಕ್ಷಣಗಣನೆಯಲ್ಲಿದೆ. ಈ ಬಡ ಕುಟುಂಬಕ್ಕೆ ಈ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವಷ್ಟು, ಪ್ರತ್ಯೇಕ ಮನೆ ನಿರ್ಮಿಸುವಷ್ಟು ಸ್ಥಿತಿವಂತರಾಗಿಲ್ಲದೇ ಇರುವುದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಪುಟ್ಟ ಮನೆ ನಿರ್ಮಾಣದ ಕನಸು ಹೊತ್ತ ಈ ಹಿರಿಜೀವಗಳ ಆಸರೆಗಾಗಿ ದಾನಿಗಳು ಮುಂದೆ ಬಂದರೆ ಇವರ ಪುಟ್ಟ ಮನೆ ನಿರ್ಮಾಣದ ಕನಸು ಕೈಗೂಡಬಹುದು. ಮಳೆಗಾಲಕ್ಕೆ ಮುನ್ನ ನೆರವು ಸಿಗಲಿ ಪುಟ್ಟದಾದ ಮನೆಯನ್ನು ನಿರ್ಮಿಸುವ ಕನಸು ಹೊತ್ತಿರುವ ನಾಗಮ್ಮ ಅವರ ಕುಟುಂಬ ಮನೆ ನಿರ್ಮಿಸಲು ದಾನಿಗಳ, ಸಂಘ ಸಂಸ್ಥೆಗಳ ನೆರವು ಯಾಚಿಸಿದೆ. ಮಳೆಗಾಲಕ್ಕೆ ಮುನ್ನ ಈ ಕುಟುಂಬಕ್ಕೆ ಮನೆಯ ಆಸರೆ ದೊರೆತರೆ ಹಿರಿ ಜೀವ ನಾಗಮಜ್ಜಿಯ ಕನಸು ನನಸಾದಂತೆಯೇ.

ಮನೆಗಾಗಿ ಆರ್ಥಿಕ ನೆರವು ನೀಡುವವರು ಅವರ ಸೊಸೆ ಜಯಂತಿ ಅವರ ಬ್ಯಾಂಕ್ ಖಾತೆ ಮೂಲಕ ನೆರವು ನೀಡಬಹುದು, ವಸ್ತು ರೂಪದಲ್ಲಿ ನೆರವು ನೀಡುವವರು ಅವರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಬ್ಯಾಂಕ್ ಖಾತೆ ವಿವರ: ಜಯಂತಿ, ಬ್ಯಾಂಕ್ ಆಫ್ ಬರೋಡ, ತುಂಬೆ ಶಾಖೆ, ಖಾತೆ ಸಂಖ್ಯೆ83710100001702, ದೂರವಾಣಿ ಅಥವಾ ಗೂಗಲ್ ಪೇ ಗಾಗಿ 9525538870 ಸಂಖ್ಯೆಯನ್ನು ಸಂಪರ್ಕಿಸಬಹುದು. ವಸ್ತು ರೂಪದಲ್ಲಿ ನೆರವು ನೀಡುವವರು ಹೆಚ್ಚಿನ ಮಾಹಿತಿಗೆ  9964213454,9164323856.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss