ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕನಸು ನನಸಾಗಿಸಿಕೊಂಡ್ರು ಈ ಸರ್ಕಾರಿ ಅಧಿಕಾರಿ: ನಾಲ್ಕೇ ತಿಂಗಳಿನಲ್ಲಿ 65 ಕಲ್ಯಾಣಿ ಫುಲ್ ಕ್ಲೀನ್!

  • ಹಿತೈಷಿ

ಕಲ್ಯಾಣಿ, ಪುಷ್ಕರಣಿ, ಕುಂಡ, ಸರೋವರಗಳು ಭಾರತದ ಪ್ರಮುಖ ಜಲ ಸಂಪನ್ಮೂಲಗಳು. ಈಗಲೂ ಭಾರತದ ಪುರಾತನ ಕಾಲದ ದೇವಾಲಯಗಳಲ್ಲಿ ನಾವು ಕಲ್ಯಾಣಿಗಳನ್ನು ಕಾಣಬಹುದು. ಈಗಿನ ತಾಂತ್ರಿಕ ಯುಗದಲ್ಲಿ ಈ ರೀತಿಯಾದಂತಹ ಶಿಲ್ಪಕಲೆಗಳು ಕಣ್ಮರೆಯಾಗಿ ಹೋಗಿವೆ.

ಈ ಕಲ್ಯಾಣಿಗಳ ಮೇಲೆ ಡಾಂಬಾರು, ಕಟ್ಟಡಗಳನ್ನು ನಿರ್ಮಿಸಿ ಜಲ ಮೂಲವನ್ನೇ ನಾಶ ಮಾಡಿದಂತಾಗಿದೆ. ಜಲ ಸಂಪತನ್ನು ಉಳಿಸೋಕೆ ಜಮ್ಮು ಕಾಶ್ಮೀರದ ಉದ್ದಮ್ ಪುರದಲ್ಲಿ ತಂಡವೊಂದು ಈ ಮಹತ್ಕಾರ್ಯಕ್ಕೆ ಕೈ ಹಾಕಿದೆ.
ಜಮ್ಮುವಿನ ತೋಟಗಾರಿಕೆ ಯೋಜನೆ ಹಾಗೂ ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ವಿಜಯ್ ಅತ್ರಿ ಅವರು, ತಮ್ಮ ಊರಿನಲ್ಲಿ ಕಣ್ಮರೆಯಾಗುತ್ತಿದ್ದ ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡುವ ಮಹದಾಸೆ ಕಂಡರು.

ಕಾಶ್ಮೀರದಿಂದ ಪ್ರವಾಸಿ ತಾಣಗಳಲ್ಲಿ ಈಶಾನ್ಯಕ್ಕೆ 70 ಕಿ.ಮೀ. ದೂರದಲ್ಲಿರುವ ಉದ್ದಮ್ ಪುರ ಕೂಡ ಒಂದು. ಈ ನಾಡನ್ನು ‘ಕಲ್ಯಾಣಿಗಳ ಭೂಮಿ’ ಎಂದೇ ಕರೆಯಲಾಗುತ್ತಿತ್ತು. ಕಲ್ಯಾಣಿಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದು, ಅದನ್ನು ಪುನರುಜ್ಜೀವನಗೊಳಿಸಲು ನಿಶ್ಚಯಿಸಿದ ಅವರು, ಸುಮಾರು 50 ಕಲ್ಯಾಣಿಗಳನ್ನು ಪಟ್ಟಿ ಮಾಡಿದರು.

ಕಾಶ್ಮೀರ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಜೊತೆಗೆ ನರೇಶ್ ಕುಮಾರ್, ದೀಪಕ್ ಕುಮಾರ್ ಮತ್ತು ಕೇಶವ್ ಶರ್ಮಾ, ಪ್ರತಿ ಭಾನುವಾರ ಕಲ್ಯಾಣಿಗಳನ್ನು ಸ್ವಚ್ಛ ಮಾಡಲು ತೀರ್ಮಾನಿಸಿದರು. ಮಾರ್ಚ್ 2021ರಲ್ಲಿ ಆಲಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ‘ಸೇವ್ ದಿ ಸ್ಟೆಪ್ ವೆಲ್ ಮಿಷನ್’ ಶುರು ಮಾಡಿದರು.

ತಂಡದ ಈ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋಕೆ ಶುರು ಮಾಡಿದರು. ಇದರ ಫಲವಾಗಿ ಅನೇಕರು ಕಲ್ಯಾಣಿ ಸ್ವಚ್ಛತೆಗೆ ಕೈಜೋಡಿಸಲು ಮುಂದಾದರು. ಇದರಿಂದ ಅವರ ಕೆಲಸ ದುಪಟ್ಟು ಆಗಲು ಶುರುವಾಯ್ತು. ಬಾಸಿ, ರಾಮ್‌ನಗರ, ಟಿಕ್ರಿ, ದೇವಿಕಾ ನದಿ, ಬಟಾಲ್ ಬಲ್ಲಿಯಾನ್, ಲಂಡಾನಾ ಮತ್ತು ಇತರ ಪ್ರದೇಶಗಳಲ್ಲಿನ ಜನರು ಸೇರಿ ಬರೋಬ್ಬರಿ 65 ಕಲ್ಯಾಣಿಗಳನ್ನು 4 ತಿಂಗಳಲ್ಲಿ ನಳನಳಿಯುವಂತೆ ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ 13 ಜಿಲ್ಲೆಗಳು ಸ್ಫೂರ್ತಿ ಪಡೆದಿದೆ.

ಮನ್ನಣೆ: ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದ್ದ ಈ ಕೆಲಸಕ್ಕೆ ಜನರ ಮನ್ನಣೆ ಗಳಿಸುವುದರ ಜೊತೆಗೆ ಜಿಲ್ಲಾಧಿಕಾರಿ ಕನ್ವಲ್ ಚಿಬ್ ಅವರಿಂದಲೂ ಬೇಷ್ ಎನಿಸಿಕೊಂಡು, ‘ವಾಟರ್ ವಾರಿಯರ್’ ಎಂಬ ಖ್ಯಾತಿ ಪಡೆಯಿತು.
ಡಾಂಬರೀಕರಣದಿಂದ ಈ ಜಲ ಸಂಪನ್ಮೂಲಗಳನ್ನು ನಾವು ಕಳೆದುಕೊಳ್ಳುತ್ತಿದ್ದು, ತಜ್ಞರ ಸಹಾಯದಿಂದ ಕಲ್ಯಾಣಿಗಳನ್ನು ಉಳಿಸುವ ಕಾರ್ಯ ನಡೆಯಲಿದೆ. ಪುನರುಜ್ಜೀವನಗೊಂಡ ಕಲ್ಯಾಣಿಗಳ ಮಾಹಿತಿಯನ್ನು ಅಧಿಕೃತ ವೆಬ್ ನಲ್ಲಿ ಹಂಚಲು ಮುಂದಾಗಿದ್ದಾರೆ.

ಕಾರ್ಯಕರ್ತನ ಮಾತು: ದಲೀಪ್ ಕುಮಾರ್ ಇಂಜಿನಿಯರಿಂಗ್ ಮುಗಿಸಿ ಕಾಶ್ಮೀರಕ್ಕೆ ಬಂದಿದ್ದರು,  ಕಲ್ಯಾಣಿಗಳು ನಮ್ಮ ಜಿಲ್ಲೆಯ ಅತ್ಯಮೂಲ್ಯವಾದ ಆಸ್ತಿ. ಇದನ್ನು ಉಳಿಸಲು ಮುಂದೆ ಬಂದಿರುವ ತಂಡದೊಂದಿಗೆ ನಾನು ಕೈ ಜೋಡಿಸಿದೆ. ಸದ್ಯ ತಂಡದ ಕಾರ್ಯಕರ್ತರೇ ಈ ಸ್ವಚ್ಛತೆಯ ವೆಚ್ಚ ಭರಿಸುತ್ತಿದ್ದಾರೆ ಎಂದರು.

ಲಾಭ ಏನು?
ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲೆಯಲ್ಲಿರುವ 877 ಕಲ್ಯಾಣಿಗಳನ್ನು ಪತ್ತೆ ಮಾಡಿದೆ. ಜೊತೆಗೆ ಇದರ ಪುನರುಜ್ಜೀವನಕ್ಕೆ ಸಮಗ್ರ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಲ್ಯಾಣಿ ಹಾಗೂ ನಮ್ಮ ಅಂತರ್ಜಲ ಮಟ್ಟವನ್ನು ರಕ್ಷಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿದಲಿದೆ. ಇದರಿಂದ ಮುಂದಿನ ಪೀಳಿಗೆಗೆ ನಾವು ಜಲ ಸಂಪತನ್ನು ಉಳಿಸಿದಂತಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss