Wednesday, February 1, 2023

Latest Posts

ಈ ಅರ್ಧಶತಕ ನಿನಗಾಗಿ: ಅಗಲಿದ ಮುದ್ದು ನಾಯಿಯನ್ನು ನೆನೆದ ರೋಹಿತ್ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ಧ ಸಿಡಿಸಿದ 47ನೇ ಅರ್ಧಶತಕವನ್ನು ನಾಯಕ ರೋಹಿತ್ ಶರ್ಮಾ ಅಗಲಿದ ತಮ್ಮ ಮುದ್ದು ನಾಯಿಗೆ ಅರ್ಪಿಸಿದ್ದಾರೆ.
ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 83 ರನ್( 67 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.

ಇಂದು ಏಕದಿನ 47ನೇ ಅರ್ಧ ಶತಕ ಬಾರಿಸಿದ ಬಳಿಕ ಆಕಾಶದತ್ತ ನೋಡುತ್ತಾ ತಮ್ಮ ಪ್ರೀತಿಯ ನಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಾಕು ನಾಯಿಯ ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಮವಾರ ನಮ್ಮ ಜೀವನದ ಅತ್ಯಂತ ಕಠಿಣವಾದ ದಿನವಾಗಿತ್ತು. ನಾವು ನಮ್ಮ ಜೀವನದ ಪ್ರೀತಿಯ ನಾಯಿಗೆ ವಿದಾಯ ಹೇಳಿದೆವು. ನಮ್ಮ ಮೊದಲ ಪ್ರೀತಿ, ಮೊದಲ ಮಗು, ಇದುವರೆಗೆ ಬದುಕಿದ್ದ ಅತ್ಯಂತ ಸೌಮ್ಯವಾದ ಜೀವ. ನಿನ್ನನ್ನು ಮತ್ತೆ ಭೇಟಿಯಾಗುವವರೆಗೆ ನಮ್ಮ ಜೀವನದಲ್ಲಿ ಸಂತೋಷ ಕಡಿಮೆಯಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!