Tuesday, March 28, 2023

Latest Posts

INTRESTING | ಇದು 70ರ ಹರೆಯದ ಲವ್ ಮ್ಯಾರೇಜ್, ಪ್ರೀತಿಗೆ ವಯಸ್ಸಿಲ್ಲ ಬಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಯುವ ಪೀಳಿಗೆ ಮಾತ್ರ ಲವ್ ಮ್ಯಾರೇಜ್ ಆಗಬೇಕು ಅಂತಿಲ್ಲ, ಅಥವಾ ಲವ್ ಮ್ಯಾರೇಜ್ ಆದ ವಯಸ್ಸಾದ ಕಪಲ್ ಇರಬೇಕು ಅಂತಲೂ ಇಲ್ಲ.. 70ರ ಹರೆಯದಲ್ಲೂ ಲವ್ ಮಾಡಿ ಮದುವೆ ಆಗಬಹುದು. ಹೀಗಂತಿದ್ದಾರೆ ಮಹಾರಾಷ್ಟ್ರದ ಕೊಲ್ಲಾಪುರದ ಯಂಗ್ ಜೋಡಿ.

ಇವರ ಭೇಟಿ ಕಾಲೇಜ್ ಅಥವಾ ಕೆಲಸದ ವೇಳೆ ಆಗಿಲ್ಲ, ಬದಲಾಗಿ ಭೇಟಿ ಆಗಿದ್ದು ವೃದ್ಧಾಶ್ರಮದಲ್ಲಿ. ಹೌದು, ವೃದ್ಧಾಶ್ರಮದಲ್ಲಿ ಭೇಟಿಯಾಗಿ, ಪರಸ್ಪರ ಸ್ನೇಹ, ಪ್ರೀತಿ ಆದಮೇಲೆ ಮದುವೆ ಮಾಡಿಕೊಳ್ಳೋದಕ್ಕೆ ಜೋಡಿ ನಿರ್ಧಾರ ಮಾಡಿದೆ.

ವೃದ್ಧಾಶ್ರಮದ ಎಲ್ಲರೂ ಸೇರಿ ಸಿಂಪಲ್ ಆಗಿ ಮದುವೆಯನ್ನು ಮಾಡಿದ್ದಾರೆ. ಈಗಾಗಲೇ ಒಂದೇ ವೃದ್ಧಾಶ್ರಮದಲ್ಲಿದ್ದ ಜೋಡಿ ಪರಸ್ಪರ ನಂಬಿಕೆಯಿಟ್ಟು, ಒಂದೇ ಜೀವನ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಎಲ್ಲರ ಬಳಿ ಪ್ರೀತಿ ಬಗ್ಗೆ ಹೇಳಿದಾಗ, ವೃದ್ಧಾಶ್ರಮ ಇದನ್ನು ಸಂಭ್ರಮಿಸಿ ಮದುವೆಗೆ ಅಣಿ ಮಾಡಿದ್ರು.

ಮದುಮಗ, ಮದುಮಗಳಿಗೆ ಮೆಹೆಂದಿ, ಅರಿಶಿನ ಶಾಸ್ತ್ರ ಮದುವೆ ಹೀಗೆ ಎಲ್ಲ ಕಾರ್ಯವೂ ವೃದ್ಧಾಶ್ರಮದಲ್ಲೇ ನಡೆದಿದೆ. ಒಂಟಿ ಜೀವನ ಬೇಡ ಜಂಟಿಯಾಗಿ ಇನ್ನೂ ಹೆಚ್ಚು ಕಾಲ ಸುಖವಾಗಿ ಬಾಳಿ ಅಂತಿದ್ದಾರೆ ನೆಟ್ಟಿಗರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!