ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪ್ರಾಣಿಗಳ ದೃಶ್ಯ ಬಹುಬೇಗನೇ ನಮ್ಮ ಮನಸ್ಸಿಗೆ ಆಪ್ತವೆನಿಸುತ್ತದೆ. ಮತ್ತೆ ಮತ್ತೆ ಅದೇ ದೃಶ್ಯವನ್ನು ನೋಡುತ್ತಿರುತ್ತೇವೆ. ಅದರಲ್ಲೂ ಮುದ್ದು ಶ್ವಾನಗಳ ದೃಶ್ಯವಂತೂ ಮುಖದಲ್ಲಿ ನಗುಹೊನಲನ್ನೇ ಹರಿಸಿಬಿಡುತ್ತವೆ. ಇದೀಗ ಅಂತಹದೇ ದೃಶ್ಯ ವೈರಲ್ ಆಗಿದೆ.
ಪುಟಾಣಿ ಕಂದನಿಗೆ ಎತ್ತರದ ಬೆಡ್ ಹತ್ತಲು ಶ್ವಾನವೊಂದು ಮಟ್ಟಿಲಾದ ದೃಶ್ಯ ಇದು. ಈ ಹೃದಯಂಗಮ ದೃಶ್ಯಕ್ಕೆ ನೆಟ್ಟಿಗರು ಅರೆಕ್ಷಣದಲ್ಲಿ ಫಿದಾ ಆಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಪುಟಾಣಿ ಕಂದ ಬೆಡ್ ಮೇಲೆ ಹತ್ತಲು ಕಷ್ಟಪಟ್ಟು ಪ್ರಯತ್ನಿಸುವ ದೃಶ್ಯದ ಮೂಲಕ ಈ ದೃಶ್ಯ ಶುರುವಾಗುತ್ತದೆ. ಅಲ್ಲೆ ಪಕ್ಕಕ್ಕೆ ಮಲಗಿದ ಶ್ವಾನ ಪುಟಾಣಿ ಬೆಡ್ ಹತ್ತುವಾಗ ಕಾಲು ಜಾರಿ ಬೀಳಬಾರದೆಂದು, ಕಂದನ ಹತ್ತಿರಕ್ಕೆ ಓಡಿ ಬಂದು ಕಾಲ ಕೆಳಗೆ ಮಲಗುತ್ತದೆ. ಹೀಗಾಗಿ, ಮುದ್ದು ಕಂದನಿಗೆ ಆರಾಮವಾಗಿ ಬೆಡ್ ಮೇಲೆ ಹತ್ತುತ್ತದೆ.
Don’t worry mini human I will help you 😍❤️ pic.twitter.com/y7r2g7on7d
— ❤️ A page to make you smile ❤️ (@hopkinsBRFC21) October 8, 2021