Friday, July 1, 2022

Latest Posts

ಚಪಾತಿಗೂ ಸೈ, ಅನ್ನಕ್ಕೂ ಜೈ ಈ ಮೂಲಂಗಿ ಸೊಪ್ಪಿನ ಟೇಸ್ಟಿ ರೆಸಿಪಿ.. ಹೇಗೆ ಮಾಡೋದು ನೋಡಿ….

ಸಾಮಾನ್ಯವಾಗಿ ಎಲ್ಲರೂ ಮೂಲಂಗಿ ತಿಂದು ಅದರ ಸೊಪ್ಪನ್ನು ಎಸೆಯುತ್ತಾರೆ. ಆದರೆ ಅದರ ಸೊಪ್ಪಿನಲ್ಲಿಯೇ ವಿಟಮಿನ್ ಇರುವುದು. ಮೂಲಂಗಿ ಸೊಪ್ಪಿನಿಂದಲೂ ಪಲ್ಯ ಮಾಡಬಹುದು. ಇಲ್ಲಿದೆ ನೋಡಿ ರೆಸಿಪಿ…

ಬೇಕಾಗುವ ಸಾಮಗ್ರಿ:

ಮೂಲಂಗಿ ಸೊಪ್ಪು- ಒಂದು ಕಟ್ಟು
ಹಸಿ ಮೆಣಸಿನ ಕಾಯಿ- 4
ಎಣ್ಣೆ- 4 ಚಮಚ
ಈರುಳ್ಳಿ
ಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
ಕಡಲೆ ಬೀಜದ ಪುಡಿ- ಒಂದು ಚಮಚ
ಅರ್ಧ ಚಮಚ ಸಾಸಿವೆ
ಒಂದು ಚಮಚ ಉದ್ದಿನ ಬೇಳೆ ಮತ್ತು ಕಡಲೆ ಬೇಳೆ

ಮಾಡುವ ವಿಧಾನ:

  • ಮೂಲಂಗಿ ಸೊಪ್ಪನ್ನು ಚೆನ್ನಾಗಿ ಉಪ್ಪು ಅರಿಶಿನ ಹಾಕಿ ತೊಳೆದು ಸಣ್ಣಗೆ ಹೆಚ್ಚಿಟ್ಟು ಕೊಳ್ಳಿ.
  •  ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಕೂಡ ಸಣ್ಣಗೆ ಹಚ್ಚಿ ಕೊಳ್ಳಿ
  • ಬಾಣಲೆಗೆ ಎಣ್ಣೆ ಹಾಕಿ , ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ. ಒಂದು ಚಮಚ ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಹಾಕಿ.
  • ಬೇಳೆಗಳು ಬೆಂದ ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಅದಕ್ಕೆ ಹಾಕಿ ಕೆಂಪಗೆ ಹುರಿಯಿರಿ.
  • ನಂತರ ಅದಕ್ಕೆ ಹೆಚ್ಚಿಟ್ಟು ಕೊಂಡ ಮೂಲಂಗಿ ಸೊಪ್ಪು ನ್ನು ಹಾಕಿ ಕೈಯಾಡಿಸುತ್ತಾ ಇರಿ.
  • ಸೊಪ್ಪು ನೀರು ಬಿಟ್ಟುಕೊಳ್ಳುತ್ತದೆ ಹಾಗಾಗಿ ಮತ್ತೆ ನೀರು ಹಾಕುವ ಅಗತ್ಯವಿಲ್ಲ
  • ಸೊಪ್ಪು ಬೆಂದ ನಂತರ ಅದಕ್ಕೆ ಕಾಯಿ ತುರಿ , ಉಪ್ಪು ಮತ್ತು ಕಡಲೆ ಬೀಜದ ಪುಡಿ ಹಾಕಿರಿ ಚೆನ್ನಾಗಿ ಮಿಕ್ಸ್ ಮಾಡಿ. ಈ ರೀತಿ ಮಾಡಿದರೆ ಮೂಲಂಗಿ ಸೊಪ್ಪಿನ ಪಲ್ಯ ರೆಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss