ಒಂದೇ ಒಂದು ಫೋಟೊದಿಂದ ದಿನಗೂಲಿ ಕಾರ್ಮಿಕ ಮಾಡೆಲ್ ಆಗಿದ್ದು ಹೀಗೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೋಟೊಗ್ರಾಫರ್ ತೆಗೆದ ಫೋಟೊ ಒಂದರಿಂದ ದಿನಗೂಲಿ ಕಾರ್ಮಿಕನೊಬ್ಬ ಸೂಪರ್ ಮಾಡೆಲ್ ಆಗಿದ್ದಾನೆ! ಹೌದು, ಈಗಿನ ಕಾಲದಲ್ಲಿ ಮಾಡೆಲ್ ಆಗೋಕೆ ಸಾಕಷ್ಟು ಹರಸಾಹಸ ಮಾಡಬೇಕಾಗುತ್ತದೆ. ಆದರೆ ಕೇರಳದ ಕೊಯಿಕ್ಕೋಡ್‌ನ ಕಾರ್ಮಿಕನಿಗೆ ಏಕಾಏಕಿ ಮಾಡೆಲ್ ಆಗೋ ಅದೃಷ್ಟ ಒಲಿದು ಬಂದಿದೆ.

ಕೊಳಕು ಲುಂಗಿ, ಮಸುಕಾದ ಶರ್ಟ್ ಹಾಕಿದ್ದ 60 ವರ್ಷದ ಕಾರ್ಮಿಕ ಮಮ್ಮಿಕಾ ಫೋಟೊವೊಂದನ್ನು ಫೋಟೊಗ್ರಾಫರ್ ಕ್ಲಿಕ್ಕಿಸಿದ್ರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ಥಳೀಯ ಸಂಸ್ಥೆಯೊಂದು ಈ ಫೋಟೊ ಗಮನಿಸಿದ್ದು, ಮಾಡೆಲ್ ಆಗಿ ಆಯ್ಕೆ ಮಾಡಿ, ಮೇಕ್‌ಓವರ್ ಮಾಡಿ ಫೋಟೊ ತೆಗೆಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೇಕ್‌ಓವರ್ ಫೋಟೊಗಳು ವೈರಲ್ ಆಗಿದ್ದು, ಇವರದ್ದು ಎಂಥಾ ಅದೃಷ್ಟ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!