Friday, August 12, 2022

Latest Posts

ಜಪಾನಿನ ಶಾಲೆಗಳಲ್ಲಿ ಲಂಚ್‌ಬ್ರೇಕ್ ಹೇಗಿರತ್ತೆ ಗೊತ್ತಾ? 45 ನಿಮಿಷದಲ್ಲಿ ಇಷ್ಟೆಲ್ಲಾ ಮಾಡಿಸ್ತಾರಾ?

ಮೇಘನಾ ಶೆಟ್ಟಿ, ಶಿವಮೊಗ್ಗ

ಮಧ್ಯಾಹ್ನ ಒಂದು ಗಂಟೆ ಆಗೋದಕ್ಕೆ ಬಕಪಕ್ಷಿಯಂತೆ ಕಾಯುತ್ತಿದ್ದೆವು, ಬೆಲ್‌ ಹೊಡೆದ ತಕ್ಷಣ ಟೀಚರ್‌ ಇದಾರೆ ಅನ್ನೋದನ್ನೂ ಲೆಕ್ಕಕಿಡದೇ ಬೊಬ್ಬೆ ಹೊಡೆಯುತ್ತಿದ್ದೆವು. ಲಂಚ್‌ ಬ್ರೇಕ್‌ ಅನ್ನೋದು ಅಷ್ಟು ಮುಖ್ಯ. ನಮ್ಮ ಜಾಗದಲ್ಲಿ ಬೇರೆ ಯಾವುದಾದರೂ ಗ್ಯಾಂಗ್‌ ಕೂತುಬಿಟ್ಟರೆ ಅನ್ನೋ ಭಯ ಬೇರೆ!
ಲಂಚ್‌ ಬ್ರೇಕ್‌ನಲ್ಲಿ ಬಾಕ್ಸ್‌ನ ಊಟ ತಿಂದು, ಸಮಯ ಮುಗಿಯೋವರೆಗೂ ಬಿಸಿಲಿನಲ್ಲಿ ಕುಣಿದು ಬೆವರಿಳಿಸಿಕೊಂಡು ಮತ್ತೆ ತರಗತಿಗೆ ಹಾಜರಾಗುತ್ತಿದ್ದೆವು.

ಜಪಾನಿನ ಶಾಲೆಗಳಲ್ಲಿ ಲಂಚ್‌ ಬ್ರೇಕ್‌ನಲ್ಲಿ ಏನೆಲ್ಲಾ ಮಾಡಿಸ್ತಾರೆ ಗೊತ್ತಾ?

ಜಪಾನಿನ ಶಾಲೆಗಳಲ್ಲಿ ಕೊಡುವ ಲಂಚ್‌ ಬ್ರೇಕ್‌ನಲ್ಲಿ ಬರೀ ಊಟ ಅಷ್ಟೇ ಅಲ್ಲ, ಪಾಠ ಕೂಡ ಇರುತ್ತದೆ. ಇದು ಸಿಲಬಸ್‌ನ ಪಾಠ ಅಲ್ಲ, ಜೀವನಕ್ಕೆ ಬೇಕಾಗೋ ಪಾಠ. ಪ್ರಾಥಮಿಕ ಹಂತದಿಂದಲೇ ಈ ರೀತಿ ಶಿಕ್ಷಣ ಮಕ್ಕಳಿಗೆ ದೊರೆಯೋದು ತುಂಬಾನೇ ಒಳಿತು. ಏನೆಲ್ಲಾ ನಡೆಯುತ್ತದೆ ಲಂಚ್‌ ಬ್ರೇಕ್‌ನಲ್ಲಿ ನೋಡೋಣ ಬನ್ನಿ..
ಶಾಲೆಯ ಎಲ್ಲ ಮಕ್ಕಳಿಗೂ ತರಕಾರಿ ಬೆಳೆಯುವ ಜವಾಬ್ದಾರಿ ನೀಡುತ್ತಾರೆ. ಶಾಲೆ ಪಕ್ಕದಲ್ಲಿಯೇ ತೋಟ ಮಾಡಿ, ಅಲ್ಲಿ ವಿಧವಿಧದ ತರಕಾರಿ ಬೆಳೆಯಲಾಗುತ್ತದೆ. ಒಂದೊಂದು ತರಗತಿಯವರಿಗೆ ಒಂದೊಂದು ತರಕಾರಿ. ಉದಾಹರಣೆಗೆ ಆರನೇ ಕ್ಲಾಸ್‌ ಮಕ್ಕಳು ಆಲೂಗಡ್ಡೆ ಬೆಳೆದರೆ, ನಾಲ್ಕನೇ ತರಗತಿ ಮಕ್ಕಳಿಗೆ ಟೊಮ್ಯಾಟೊ ಬೆಳೆಯುವ ಕೆಲಸ.

See the source imageನಂತರ ಅವರು ಬೆಳೆದ ತರಕಾರಿಗಳನ್ನು ಅವರೇ ಆರಿಸಿ ಕಿಚನ್‌ಗೆ ನೀಡುತ್ತಾರೆ. ಕಿಚನ್‌ನಲ್ಲಿ ಮಕ್ಕಳು ಬೆಳೆದ ತರಕಾರಿಗಳಿಂದ ರುಚಿಕರ ಅಡುಗೆ ತಯಾರಾಗುತ್ತದೆ. ಪ್ರತಿದಿನವೂ ಬ್ರೆಡ್‌, ಮೀನು, ಮೊಟ್ಟೆ, ಸೂಪ್‌ ಹಾಗೂ ಮ್ಯಾಶ್ಡ್‌ ಪೊಟ್ಯಾಟೊಸ್‌ ನೀಡಲಾಗುತ್ತದೆ.

See the source imageಅಡುಗೆಯಾದ ನಂತರ ಆಯಾ ತರಗತಿ ಮಕ್ಕಳಿಗೆ ಸಾಕಾಗುವಷ್ಟು ಆಹಾರವನ್ನು ಒಂದೆಡೆ ಸಂಗ್ರಹಿಸಿ ಇಡಲಾಗುತ್ತದೆ.

See the source imageಲಂಚ್‌ ಬ್ರೇಕ್‌ ಬೆಲ್‌ ಹೊಡೆದ ತಕ್ಷಣ ಮಕ್ಕಳು ಏಪ್ರನ್‌, ಮಾಸ್ಕ್‌ ಧರಿಸಿ ಅಡುಗೆ ಪಾತ್ರೆಗಳಿರುವ ಜಾಗಕ್ಕೆ ತೆರಳುತ್ತಾರೆ. ಎಲ್ಲರೂ ಒಗ್ಗಟ್ಟಿನಲ್ಲಿ ಅಡುಗೆ ಪಾತ್ರೆಗಳನ್ನು ಡೈನಿಂಗ್‌ ಏರಿಯಾಗೆ ತರುತ್ತಾರೆ.
ನಂತರ ವಾರಕ್ಕೆ ಆರು ಮಕ್ಕಳು ನಿಂತು ಎಲ್ಲರಿಗೂ ಊಟ ಬಡಿಸುತ್ತಾರೆ. ಎಲ್ಲರ ಊಟದ ಜೊತೆ ತಮ್ಮ ತಟ್ಟೆಗೂ ಊಟ ಹಾಕಿಕೊಂಡು ಕಡೆಯಲ್ಲಿ ತಿನ್ನುತ್ತಾರೆ.

See the source imageಇಡೀ ತರಗತಿಗೆ ಇನ್ನೂ ಎಷ್ಟು ಆಹಾರ ಮಿಕ್ಕಿದೆ ಎಂದು ಜೋರಾಗಿ ಹೇಳುತ್ತಾರೆ. ಉಳಿದ ಆಹಾರ ತಿನ್ನೋದಕ್ಕೆ ಮತ್ತೆ ಆಟಗಳನ್ನು ಆಡುತ್ತಾರೆ. ಆಟದಲ್ಲಿ ಗೆದ್ದವರು ಎರಡನೇ ಮೀನನ್ನು ತಿನ್ನುತ್ತಾರೆ. ಊಟದ ನಂತರ ಎಲ್ಲರೂ ಬ್ರಶ್ ಮಾಡಲೇಬೇಕು. ಬ್ರಶ್ ಆದ ನಂತರ ಕ್ಲೀನಿಂಗ್ ಕೆಲಸ ಶುರು, ಶಾಲೆಯ ಕಾರಿಡಾರ್‌ಗಳು, ಲ್ಯಾಬ್‌ಗಳು, ತರಗತಿಗಳನ್ನು ಮಕ್ಕಳೇ ಕ್ಲೀನ್ ಮಾಡುತ್ತಾರೆ.

See the source imageಮಕ್ಕಳ ಬಳಿ ಇಷ್ಟೆಲ್ಲಾ ಕೆಲಸ ಮಾಡಿಸುವುದರ ಹಿಂದೆ ಪಾಠವಿದೆ. ಹೊಂದಿಕೊಂಡು ಹೋಗುವ ಗುಣ ಇಲ್ಲಿ ಬೆಳೆಯುತ್ತದೆ. ನಾವು ಬೆಳೆದರೆ ಮಾತ್ರ ನಮಗೆ ಆಹಾರ, ಕಷ್ಟ ಪಟ್ಟರೆ ಸುಖ ಎನ್ನುವ ಪಾಠ ಕಲಿಯುತ್ತಾರೆ. ಕೆಲವೊಮ್ಮೆ ಬೇರೆಯವರಿಗಾಗಿ ತ್ಯಾಗ ಮಾಡುವುದು, ತಾಳ್ಮೆ ಕಲಿಯುವುದು, ಸ್ವಚ್ಛತೆ ಎಲ್ಲ ಅಂಶಗಳನ್ನು ಮಕ್ಕಳು ಕಲಿಯುತ್ತಾರೆ. ಇಷ್ಟೆಲ್ಲಾ ಪಾಠಗಳು ಪಠ್ಯದ ಜೊತೆ ಮಕ್ಕಳು ಕಲಿಯುತ್ತಾರೆ. ಇವರ ಜೀವನಕ್ಕೆ ಇದು ಎಂದೆಂದಿಗೂ ಸಹಾಯವಾಗುತ್ತದೆ. ಅಲ್ವಾ?

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss