ಸಾಮಾಗ್ರಿಗಳು
ಮ್ಯಾಗಿ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಮೊಟ್ಟೆ
ಎಣ್ಣೆ
ಉಪ್ಪು
ಅರಿಶಿಣ
ನೀರು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಮೊಟ್ಟೆ ಹೊಡೆಯಿರಿ, ಇದಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ ಬಾಡಿಸಿ
ನಂತರ ಅದನ್ನು ತಟ್ಟೆಗೆ ತೆಗೆದು ಮತ್ತದೇ ಪಾತ್ರೆಗೆ ಎಣ್ಣೆ ಹಸಿಮೆಣಸು ಹಾಕಿ.
ನಂತರ ಟೊಮ್ಯಾಟೊ ಹಾಕಿ ಬೇಯಿಸಿ
ನಂತರ ನೀರು ಹಾಕಿ ಕುದಿಸಿ ಈಗ ಮ್ಯಾಗಿ ಹಾಗೂ ಉಪ್ಪು, ಮಸಾಲಾ ಎಲ್ಲಾ ಹಾಕಿ.
ಮುಕ್ಕಾಲು ಮ್ಯಾಗಿ ಬೆಂದ ನಂತರ ಇದಕ್ಕೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿ ಮೊಟ್ಟೆ ಮ್ಯಾಗಿ ಆನಂದಿಸಿ..