ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಬಾಲಿವುಡ್ ಕಿರುತೆರೆ ಸ್ಟಾರ್ಸ್ ಕರಣ್ ಮೆಹ್ರಾ ಹಾಗೂ ನಿಶಾ ರಾವಲ್ ದಾಂಪತ್ಯ ಬೀದಿಗೆ ಬಿದ್ದಿದೆ.
ನನಗೆ ರಕ್ತ ಬರೋ ರೀತಿ ಹೊಡೆದಿದ್ದಾರೆ ಎಂದು ನಿಶಾ ಕರಣ್ ವಿರುದ್ಧ ದೂರು ದಾಖಲಿಸಿದ್ದು, ಇದೀಗ ಕರಣ್ ನಿಶಾ ವಿರುದ್ಧ ದನಿಯೆತ್ತಿದ್ದಾರೆ.
ಮನೆಯಲ್ಲಿ ಎಲ್ಲ ಭಾಗದಲ್ಲೂ ಸಿಸಿ ಕ್ಯಾಮೆರಾಗಳಿದ್ದು, ಅದನ್ನು ಕರಣ್ ಆಫ್ ಮಾಡಿದ್ದರು ಎಂದು ನಿಶಾ ಹೇಳಿದ್ದರು. ಆದರೆ ಇದೀಗ ಕರಣ್ ಮಾತನಾಡಿದ್ದು, ‘ಮನೆಯ ಎಲ್ಲ ಕ್ಯಾಮೆರಾಗಳನ್ನು ನಿಶಾ ಮೊದಲೇ ಆಫ್ ಮಾಡಿದ್ದರು, ನಂತರ ತನ್ನ ಹಣೆಯನ್ನು ತಾನೇ ಗೋಡೆಗೆ ಜಜ್ಜಿಕೊಂಡು ರಕ್ತ ಬರಿಸಿಕೊಂಡಿದ್ದರು’ ಎಂದು ಕರಣ್ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಏಳು ಕ್ಯಾಮೆರಾಗಳಿವೆ. ಬೆಡ್ರೂಂ ಬಿಟ್ಟು ಇನ್ನೆಲ್ಲ ಕಡೆ ಕ್ಯಾಮೆರಾ ಇದೆ. ಹಾಲ್ನಲ್ಲಿರುವ ಕ್ಯಾಮೆರಾದಿಂದ ನಿಶಾ ತನ್ನ ತಲೆ ಜಜ್ಜಿಕೊಂಡ ಜಾಗ ಕ್ಯಾಪ್ಚರ್ ಆಗುತ್ತಿತ್ತು. ಅದೇ ಕಾರಣದಕ್ಕೆ ನಿಶಾ ಮೊದಲೇ ಪ್ಲಾನ್ ಮಾಡಿದ್ದರು ಎಂದು ಹೇಳಿದ್ದಾರೆ.