ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ನಿಖಿಲ್ ಜೈನ್ ಜೊತೆಗಿನ ತಮ್ಮ ವಿವಾಹ ಸಂಬಂಧ ಮುರಿದುಬಿದ್ದಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಭಾರತೀಯ ಕಾನೂನು ಸಂಹಿತೆಯ ಪ್ರಕಾರ ನನ್ನ ಹಾಗೂ ನಿಖಿಲ್ ವಿವಾಹ ಮಾನ್ಯವಲ್ಲದ ಕಾರಣ ವಿಚ್ಛೇದನದ ಅವಶ್ಯಕತೆ ಇಲ್ಲ ಎಂದು ನುಸ್ರತ್ ಹೇಳಿದ್ದು, ಟರ್ಕಿಶ್ ಮದುವೆ ಕಾನೂನಿನ ಪ್ರಕಾರ ಇದು ವಿದೇಶಿ ಭೂಮಿಯಲ್ಲಿ ನಡೆದ ವಿವಾಹವಾಗಿದ್ದರಿಂದ ಇದು ಭಾರತೀಯ ವಿಶೇಷ ವಿವಾಹ ಕಾಯ್ದೆಯಡಿ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಕಾನೂನಿನ ನಿಯಮಗಳ ಪ್ರಕಾರ ಇದು ಮದುವೆಯೇ ಅಲ್ಲ. ಹೀಗಾಗಿ ಈ ಸಂಬಂಧ ಮುರಿದುಬಿದ್ದ ಬಳಿಕ ವಿಚ್ಛೇದನದ ಪ್ರಶ್ನೆ ಉದ್ಭವಿಸೋದಿಲ್ಲ. ನಾವು ಬಹಳ ಹಿಂದೆಯೇ ದೂರಾಗಿದ್ದೇವೆ. ಆದರೆ ನಾನು ಇದರ ಬಗ್ಗೆ ಇಲ್ಲಿಯವರೆಗೆ ಬಹಿರಂಗ ಹೇಳಿಕೆ ನೀಡಿರಲಿಲ್ಲ. ನಮ್ಮ ಮದುವೆ ಕಾನೂನು ಬದ್ಧವಾಗಿರಲಿಲ್ಲ. ಹೀಗಾಗಿ ಕಾನೂನಿನ ದೃಷ್ಟಿಯಲ್ಲಿ ಇದೊಂದು ಮದುವೆಯೇ ಅಲ್ಲ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಬಸಿಹತ್ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಟಿ ನುಸ್ರತ್ ಜಹಾನ್ ಜಯಭೇರಿ ಬಾರಿಸಿದ್ದರು. ಇದಾದ ಬಳಿಕ ಅವರು ಟರ್ಕಿಯಲ್ಲಿ 2019ರಲ್ಲಿ ಉದ್ಯಮಿ ನಿಖಿಲ್ ಜೈನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನುವ್ಯಕ್ತಿಯ ಹೆಸರನ್ನ ಉಲ್ಲೇಖಿಸದ ಸಂಸದೆ ನುಸ್ರತ್ ತನ್ನನ್ನ ತಾನು ಶ್ರೀಮಂತ ಎಂದು ಹೇಳಿಕೊಂಡಿರುವ ವ್ಯಕ್ತಿ ನನ್ನ ಬ್ಯಾಂಕ್ ಖಾತೆಯಿಂದ ಹಣವನ್ನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ನಾನು ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿದ್ದು ಪೊಲೀಸ್ ಕಂಪ್ಲೇಂಟ್ನ್ನೂ ದಾಖಲಿಸಿದ್ದೇನೆ. ಆ ವ್ಯಕ್ತಿ ದೇಣಿಗೆ ರೂಪದಲ್ಲಿ ನನಗೆ ಬಂದಿದ್ದ ಹಣವನ್ನೂ ದುರ್ಬಳಕೆ ಮಾಡಿದ್ದಾರೆ. ನಾನು ಈ ಬಗ್ಗೆ ಹೋರಾಡುತ್ತಿದ್ದೇನೆ ಅವಶ್ಯಕತೆ ಬಿದ್ದಲ್ಲಿ ಸಾಕ್ಷಿಯನ್ನೂ ಬಿಡುಗಡೆ ಮಾಡುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಆಸ್ತಿ ಹಾಗೂ ಆಭರಣಗಳನ್ನೂ ಅಕ್ರಮವಾಗಿ ದೋಚಿದ್ದಾರೆ. ನಾನು ಎಂದಿಗೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ನನಗೆ ಸಂಬಂಧ ಇಲ್ಲದ ವ್ಯಕ್ತಿಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿದವಳಲ್ಲ. ನನ್ನ ಸ್ವಂತ ಪರಿಶ್ರಮದಿಂದ ನಾನು ಬದುಕನ್ನ ಕಟ್ಟಿಕೊಂಡಿದ್ದೇನೆ. ನನ್ನ ಹೆಸರನ್ನ ಬಳಸಿ ಬೇರೆಯವರು ಪ್ರಚಾರ ಗಿಟ್ಟಿಸಿಲು ನಾನು ಅವಕಾಶ ನೀಡೋದಿಲ್ಲ ಎಂದು ನುಸ್ರತ್ ಹೇಳಿದ್ದಾರೆ.