Wednesday, August 10, 2022

Latest Posts

ಪ.ಬಂಗಾಳ| ಇದೇ ಮೊದಲ ಬಾರಿಗೆ ಶ್ವಾಸಕೋಶ ಕಸಿ: ರೋಗಿ ಮೇಲೆ ವೈದ್ಯರ ನಿಗಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇದೇ ಮೊದಲ ಬಾರಿಗೆ ಪ. ಬಂಗಾಳದ ಆಸ್ಪತ್ರೆಯೊಂದರಲ್ಲಿ 60 ವರ್ಷದ ರೋಗಿಯೊಬ್ಬರಿಗೆ ವೈದ್ಯರು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಈ ಹಿಂದೆ ರೋಗಿಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆ  ನಂತರ ಗುಣಮುಖರಾಗಿದ್ದರು. ಆದರೆ ಈ ಸಂದರ್ಭದಲ್ಲಿ ಅವರಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಂಡುಬಂದಿದ್ದವು.

ಬ್ರೈನ್ ಟ್ಯೂಮರ್ ನಿಂದ ಗುಜರಾತಿನ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮೃತಪಟ್ಟಿದ್ದರು. ಅವರ ಶ್ವಾಸಕೋಶವನ್ನು ವಿಮಾನದ ಮೂಲಕ ಕೋಲ್ಕತಾಗೆ ತರಿಸಿಕೊಂಡು ಈ ರೋಗಿಗೆ ಕಸಿ ಮಾಡಲಾಗಿದೆ.

11- 12 ಗಂಟೆಗಳ ಕಾಲ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ತಿಳಿದುಬಂದಿದೆ.  ರೋಗಿಯ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss