ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಬಿಗ್‌ಬಾಸ್ ಫೀವರ್ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಬಿಗ್‌ಬಾಸ್ ಕೂಡ ಆರಂಭವಾಗಲಿದೆ.
ತೆಲುಗು ಬಿಗ್‌ಬಾಸ್ ಸ್ಪರ್ಧಿಗಳಿಗೆ ಹೊಸ ಟ್ವಿಸ್ಟ್ ಕೊಡಲು ಮುಂದಾಗಿದೆ. ಈಗಾಗಲೇ ಬಿಗ್‌ಬಾಸ್ ಸೀಸನ್ 8 ಶುರುವಾಗಿ 24 ದಿನ ಕಳೆದಿವೆ. ಇತ್ತೀಚೆಗಷ್ಟೇ ಹೊಸ ಪ್ರೋಮೋ ಬಿಡುಗಡೆ ಮಾಡಿ ಬಿಗ್‌ಬಾಸ್ ಅಭಿಮಾನಿಗಳು ಹಾಗೂ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.
ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಬಿಗ್‌ಬಾಸ್ ಅನೌನ್ಸ್ ಮಾಡಿದ ಕೂಡಲೇ ಮನೆಯಲ್ಲಿರುವ ಸ್ಪರ್ಧಿಗಳನ್ನು ಬೆಚ್ಚಿ ಬಿದ್ದಿದ್ದಾರೆ. ಈ ರೀತಿ ಆಗಿರುವುದು ಬಿಗ್‌ಬಾಸ್ ಹಿಸ್ಟರಿಯಲ್ಲೇ ಇದೇ ಮೊದಲಾಗಿದೆ.
ಸೀಸನ್ 8ಕ್ಕೆ ಒಂದಲ್ಲ ಎರಡಲ್ಲ ಒಟ್ಟು 12 ಮಂದಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶ ಮಾಡಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್‌ಬಾಸ್ ರಿವೀಲ್ ಮಾಡಿದ್ದಾರೆ. ಮೊದಲು ಬಿಗ್‌ಬಾಸ್ ಬಿಗ್‌ಬಾಸ್ ಮನೆಯಲ್ಲಿ ಭೂಕಂಪ ಬರುತ್ತಿದೆ.
ಈ ಭೂಕಂಪವು ನಿಮ್ಮನ್ನು ಮನೆಯಿಂದ ಹೊರಗೆ ಕರೆದೊಯ್ಯಬಹುದು, ನಿಮ್ಮ ಉಳಿವಿಗಾಗಿ ಸವಾಲು ಹಾಕಬಹುದು, ಇನ್ನೆರಡು ವಾರಗಳಲ್ಲಿ ಒಂದಲ್ಲ, ಎರಡಲ್ಲ, 12 ವೈಲ್ಡ್ ಕಾರ್ಡ್ ಎಂಟ್ರಿಗಳು ಮನೆ ಸೇರಲಿವೆ ಬಿಗ್ ಬಾಸ್ ಇತಿಹಾಸದಲ್ಲೇ ನಡೆದಿರದ ಟ್ವಿಸ್ಟ್ ಒಂದನ್ನು ಬಹಿರಂಗಪಡಿಸಿದ್ದಾರೆ.