ಮನುಷ್ಯರು ಎದುರಿಸುವ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಲ್ಲಿ ಕಿಡ್ನಿ ಕಲ್ಲುಗಳ ಸಮಸ್ಯೆ ಕೂಡ ಒಂದು. ಸಾಮಾನ್ಯವಾಗಿ ಕಿಬ್ಬೊಟ್ಟೆಯ ಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಕಾಣಿಸಿಕೊಳ್ಳುವ ಮೂತ್ರ ಪಿಂಡದ ಈ ನೋವು ಕೆಲವೊಂದು ಬಾರಿ ಹೆರಿಗೆ ನೋವಿಗಿಂತ ಭಯಾನಕವಾಗಿದ್ದು, ಮೂತ್ರ ಪಿಂಡಗಳಲ್ಲಿ ಕಲ್ಲುಗಳ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಅನೇಕರು ಇದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ತಮ್ಮ ದೇಹದ ಇತರ ಆರೋಗ್ಯ ಸಮಸ್ಯೆಗಳ ರೀತಿಯಲ್ಲಿ ಇದನ್ನೂ ಕೂಡ ಯೋಚನೆ ಮಾಡುತ್ತಾರೆ.
ಕಿಡ್ನಿಸ್ಟೋನ್ಸ್ ನಂಥ ಸಮಸ್ಯೆಗೆ ನೀರು ಕುಡಿಯದೇ ಇರುವುದು ಒಂದು ಕಾರಣ. ದೇಹದ ಒಳಗೆ ಉಪ್ಪಿನ ಅಂಶ ಹಾಗೂ ಮಿನರಲ್ಸ್ ನ ಸಣ್ಣ ಕಲ್ಲುಗಳಾಗುತ್ತವೆ. ಇವು ಕ್ಯಾಲ್ಶಿಯಂ ಅಥವಾ ಯೂರಿಕ್ ಆಸಿಡ್ ನಿಂದ ಮಾಡಿರಲ್ಪಟ್ಟಿರುತ್ತವೆ. ಕಿಡ್ನಿಯ ಒಳಗೆ ಇವುಗಳ ಜನನವಾದರೂ ಸ್ವಲ್ಪ ದೂರ ಕಿಡ್ನಿ ಒಳಗೆ ಇವು ಓಡಾಡಬಲ್ಲವು. ತುಂಬಾ ಸಣ್ಣ ಕಲ್ಲು ಇದ್ದರೆ ತುಂಬಾ ನೀರು ಕುಡಿದು ಹಾಗೆಯೇ ಸರಿ ಮಾಡಿಕೊಳ್ಳಬಹುದು. ಈ ಕೆಳಗಿನ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಅದು ಕಿಡ್ನಿ ಸ್ಟೋನ್ ಲಕ್ಷಣ ನಿರ್ಲಕ್ಷ ಮಾಡಬೇಡಿ.
ಕಿಡ್ನಿ ಸ್ಟೋನ್ ಲಕ್ಷಣಗಳು…
ಮೂತ್ರದಲ್ಲಿ ಬದಲಾವಣೆ:
ಮೂತ್ರ ಪಿಂಡದಲ್ಲಿ ಕಲ್ಲು ಇದ್ದರೆ ಮೂತ್ರ ದುರ್ವಾಸನೆಯಿಂದ ಕೂಡಿರುತ್ತದೆ. ಮತ್ತು ಪದೇ ಪದೇ ಮೂತ್ರಕ್ಕೆ ಹೋಗುವಂತೆ ಪ್ರಚೋದಿಸುತ್ತದೆ.
ನೋವು:
ಮೂತ್ರ ಪಿಡಂದಲ್ಲಿ ಕಲ್ಲುಗಳಿದ್ದರೆ ಬೆನ್ನು ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೆರಿಗೆ ನೋವಿನಂಥ ಯಮಯಾತನೆಯ ನೋವು ಕೆಳ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಜ್ವರ:
ಮೂತ್ರ ಪಿಂಡದಲ್ಲಿ ಕಲ್ಲು ಇದ್ರೆ ಸಾಮಾನ್ಯವಾಗಿ ಕಾಣಿಸಿವ ಮತ್ತೊಂದು ಲಕ್ಷಣ ಎಂದರೆ ಜ್ವರ, ಶೀತ. ವಿಪರೀತ ಎನ್ನವಂತಹ ಜ್ವರ ಕಾಣಿಸಿಕೊಳ್ಳುತ್ತದೆ.
ಮೂತ್ರ:
ಮೂತ್ರ ವಿಸರ್ಜನೆ ಮಾಡುವಾಗ ನೋವು ಕಾಣಿಸುತ್ತದೆ. ಸರಾಗವಾಗಿ ಮೂತ್ರ ಮಾಡಲು ಆಗುವುದಿಲ್ಲ. ಕಿಡ್ನಿ ಸ್ಟೋನ್ ಹೆಚ್ಚಾದರೆ ಮೂತ್ರ ಪೂರ್ತಿ ಕಟ್ಟುತ್ತದೆ.
ವಾಂತಿ:
ಕಿಡ್ನಿ ಸ್ಟೋನ್ ಹೆಚ್ಚಾದರೆ ವಾಂತಿ ಬಂದಂತಾಗುತ್ತದೆ. ಹೊಟ್ಟೆ ತೊಳೆಸಿದಂತಹ ಅನುಭವವಾಗುತ್ತದೆ. ಆದರೆ ವಾಂತಿ ಬರುವುದಿಲ್ಲ.
ಬಾವು ಕಾಣಿಸಿಕೊಳ್ಳುವುದು
ಕಿಡ್ನಿ ದೇಹದ ಹೆಚ್ಚಿನ ತ್ಯಾಜ್ಯ ಮತ್ತು ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತದೆ.ಕಿಡ್ನಿ ಸಮಸ್ಯೆಯಿಂದ ಕೆಲಸ ಮಾಡುವುದು ನಿಲ್ಲಿಸಿದರೆ ಮುಖ, ಕೈ ಕಾಲುಗಳು ಬಾವು ಕಾಣಿಸಿಕೊಳ್ಳುತ್ತದೆ.
ವಾಸನೆ: ಮೂತ್ರ ತುಂಬಾ ವಾಸನೆಯಿಂದ ಕೂಡಿರುವುದು.