spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದು ಟೊಮಾಟೊ ಬಿಕ್ಕಟ್ಟು!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೇಶದ ಹಲವೆಡೆ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಅದರಲ್ಲೂ ಇತ್ತೀಚೆಗೆ 10 ರೂ. ಇದ್ದ ಟೊಮಾಟೊ ಬೆಲೆ ಈಗ ಶತಕದ ಗಡಿಯಲ್ಲಿದೆ.
ದರ ಏರಿಕೆಯ ಬಗ್ಗೆ ವರದಿ ಮಾಡಿರುವ ಎಎನ್ಐ ಸುದ್ದಿ ಸಂಸ್ಥೆ, ಕರ್ನಾಟದಲ್ಲಿ ಟೊಮಾಟೋ ಹೋಲ್ ಸೇಲ್ ಬೆಲೆಯೇ ಕೆ.ಜಿ.40 ರೂ.ಗೆ ಏರಿಕೆಯಾಗಿದ್ದು, ಇನ್ನೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೆ.ಜಿ. 36 ರೂ. ಆಗಿದೆ. ಇನ್ನು ದೆಹಲಿ ಹಾಗೂ ಮುಂಬೈ ನ ರಸ್ತೆ ಬದಿ ಅಂಗಡಿಗಳಲ್ಲಿ ಕೆಜಿ ಟೊಮಾಟೊ ದರ 50ಕ್ಕಿಂತ ಹೆಚ್ಚಿದ್ದರೆ, ಚೆನ್ನೈ ನಲ್ಲಿ 70 ರೂ. ಆಗಿದ್ದು ಜನರ ಜೇಬಿಗೆ ಕತ್ತರಿಬಿದ್ದಂತಾಗಿದೆ.
ಅನಿರೀಕ್ಷಿತ ಹಾಗೂ ವಾಯುಭಾರ ಕುಸಿತದಿಂದಾಗಿ ಟೊಮಾಟೊ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಬೆಳೆಗಳು ಸಂಪೂರ್ಣ ಹಾನಿಯಾಗಿರುವ ಪರಿಣಾಮ ತರಕಾರಿ ಪೂರೈಕೆ ಕಡಿಮೆಯಾಗಿ ದರ ಹೆಚ್ಚಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss