Wednesday, June 7, 2023

Latest Posts

ರಾಜಕೀಯ ನಾಯಕರ ಸಂತುಷ್ಟಗೊಳಿಸಲು ಈ ರೀತಿಯ ಮಾತು: ಖರ್ಗೆ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ರಾಜಕೀಯ ಜೀವನದಲ್ಲಿರುವವರು ಮರ್ಯಾದೆ ಕಾಪಾಡಿಕೊಳ್ಳಬೇಕು. ಅನುಭವಿ ವ್ಯಕ್ತಿಯೊಬ್ಬರು ಪ್ರಧಾನಿಯವರ ವಿರುದ್ಧ ರೀತಿಯ ನಿಂದನೆ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹುದಲ್ಲ ಎಂದು ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ, ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.

ಪ್ರಧಾನಿಯವರು ಖರ್ಗೆಯವರನ್ನು ಎಲ್ಲರೀತಿಯಲ್ಲಿ ಗೌರವಿಸುತ್ತಾರೆ. ಆದರೆ, ಖರ್ಗೆಯವರು ತಮ್ಮ ರಾಜಕೀಯ ನಾಯಕರನ್ನು ಸಂತುಷ್ಟಗೊಳಿಸಲು ಇಂತಹ ಪದಗಳ ಬಳಕೆ ಮಾಡಿದ್ದಾರೆ. ಖರ್ಗೆಯವರ ಹೇಳಿಕೆ ಅಸಾಂಸದೀಯ, ಅನಾಗರಿಕ ಮತ್ತು ಅಸ್ವೀಕಾರ್ಹ ಎಂದು ಅವರು ಹೇಳಿದರು.

ಸುಸಂಸ್ಕೃತ ಕರ್ನಾಟಕ, ಸಾಧು, ಸಂತರ, ಸಾಧಕರ ನಾಡಾಗಿದೆ. ನಾಡಿನ ಗಣ್ಯರು ಮೋದಿಯವರನ್ನು ಪ್ರಶಂಸಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ರಾಜಕೀಯಕ್ಕಾಗಿ ಪ್ರಧಾನಿಯವರನ್ನು ನಿಂದಿಸುವ ಹೇಳಿಕೆಗಳನ್ನು ನಿರಂತರ ನೀಡುತ್ತಿದ್ದಾರೆ. ಖರ್ಗೆಯವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಧಮೇಂದ್ರ ಪ್ರಧಾನ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!