ನಗರ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ..! 3ಅಂತಸ್ತಿನ ಮನೆಯಲ್ಲಿ 10 ಸಾವಿರ ಸಸ್ಯ ಕೃಷಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಗರ ಕೃಷಿ(Urban farming) ಎಂಬುದು ಇತ್ತೀಚಿನ ದಿನಗಳಲ್ಲಿ ಬಂದಿರುವ ಒಂದು ಕಲೆ. ಹಳ್ಳಿಗಳಲ್ಲಿ ಹೊಲ, ಗದ್ದೆಯಲ್ಲಿ ಬೆಳೆಯುವ ಬೆಳೆಯನ್ನು ನಗರವಾಸಿಗಳು ತಮ್ಮ ಮನೆಯ ಟೆರೇಸ್‌, ಗಾರ್ಡನ್‌ಗಳಲ್ಲಿ ಅವಶ್ಯಕತೆಯಿರುವ ವಿವಿಧ ರೀತಿಯ ತರಕಾರಿ, ಹೂವು, ಹಣ್ಣುಗಳನ್ನು ಬೆಳೆಯುವತ್ತ ಮುಖ ಮಾಡುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ರೂಢಿಸಿಕೊಂಡಿರುವ ಈ ಫಾರ್ಮಿಂಗ್‌ ನೋಡಿದ್ರೆ ಎಲ್ಲರೂ ಬಾಯ್ಮೇಲೆ ಬೆರಳಿಟ್ಟುಕೊಳ್ಳುವುದು ಗ್ಯಾರೆಂಟಿ. ತನ್ನ ಮೂರು ಅಂತಸ್ತಿನ ಕಟ್ಟಡದಲ್ಲಿ ಸುಮಾರು ಹತ್ತು ಸಾವಿರ ಗಿಡಗಳನ್ನು ಬೆಳೆಸುತ್ತಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ರಾಮ್‌ವೀರ್ ಸಿಂಗ್ ಅವರ ನಗರ ಕೃಷಿ ಮತ್ತು ಕೃಷಿ ಪದ್ಧತಿಗಳ ಬಗ್ಗೆ ನೋಡೋಣ ಬನ್ನಿ…

ಈ ಕಲ್ಪನೆ ಹುಟ್ಟಿಕೊಳ್ಳುವುದಕ್ಕೆ ಪ್ರಮುಖ ಕಾರಣ

ರಾಮವೀರ್ ಸಿಂಗ್ ಸ್ನೇಹಿತನ ತಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಆತನನ್ನು ಪರೀಕ್ಷಿಸಿದ ವೈದ್ಯರು ಅವರು ಸೇವಿಸುವ ತರಕಾರಿಯಲ್ಲಿ ವಿಷಕಾರಿ ಅಂಶ ಹೆಚ್ಚಿದ್ದು, ದೇಹದಲ್ಲಿ ಕ್ಯಾನ್ಸರ್ ಶೇಖರಣೆಯಾಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ತಿಳಿಸಿದ್ದಾರೆ. ಇದನ್ನು ಕೇಳಿದ ರಾಮ್‌ವೀರ್ ಸಿಂಗ್‌ಗೆ ನಾವು ಸೇವಿಸುವ ತರಕಾರಿ ಎಲ್ಲಿಂದ ಬಂದಿದೆ ಎಂದು ತಿಳಿಯದೇ ಅವುಗಳನ್ನು ಸೇವಿಸಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದೇವೆ ಎಂಬುದನ್ನು ಅರಿತರು. ಕೂಡಲೇ ತಾವು ಮಾಡುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬರೇಲಿಯಿಂದ 40 ಕಿಮೀ ದೂರದಲ್ಲಿರುವ ತನ್ನ ಸ್ವಂತ ಊರಿನಲ್ಲಿ ಜಮೀನು ಕೊಂಡು ಕೃಷಿಯನ್ನು ಕೈಗೊಂಡರು. ಅಲ್ಲಿ ರಾಮ್‌ವೀರ್ ಸಾವಯವವಾಗಿ ತರಕಾರಿಗಳನ್ನು ಬೆಳೆದು ಸ್ಥಳೀಯವಾಗಿ ಮಾರಾಟ ಮಾಡಿದರು. ಈ ಸಾವಯವ ವಿಧಾನವು ಹೆಚ್ಚು ಖರ್ಚು, ವೆಚ್ಚ ಹಾಗೂ ಶ್ರಮವಹಿಸಬೇಕಾಗುತ್ತದೆ ಎಂಬುದನ್ನು ಕಂಡುಕೊಂಡರು.

ಹೈಡ್ರೋಪೋನಿಕ್ಸ್ ಕೃಷಿಯತ್ತ ಗಮನ:
ಸಾವಯವ ಕೃಷಿ ಉತ್ತಮ ಎಂದು ಭಾವಿಸಿದ್ದ ರಾಮ್‌ವೀರ್ ಸಿಂಗ್, ಅದನ್ನು ಎಲ್ಲಾ ಸಮಯದಲ್ಲೂ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಶ್ರಮ, ವೆಚ್ಚ ಕೂಡಾ ಅಧಿಕ. ಆಕಸ್ಮಿಕವಾಗಿ ಒಮ್ಮೆ ಹೈಡ್ರೋಪೋನಿಕ್ಸ್ ಕೃಷಿ ವಿಧಾನದ ಬಗ್ಗೆ ಕೇಳಿದರು. 2017-18ರ ನಡುವೆ ದುಬೈನಲ್ಲಿ ನಡೆದ ಕೃಷಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಅಲ್ಲಿನ ಹೈಡ್ರೋಪೋನಿಕ್ಸ್ ಕೃಷಿಯ ಸಂಪೂರ್ಣ ವಿವರಗಳನ್ನು ತಿಳಿದುಕೊಂಡರು. ಕಡಿಮೆ ಜಾಗದಲ್ಲಿ ಮಣ್ಣಿನ ಅವಶ್ಯಕತೆ ಇಲ್ಲದೆ, ಹೈಡ್ರೋಪೋನಿಕ್ಸ್ ಎಂದರೆ ನೀರಿನ ಕೊಳವೆಗಳು ಮತ್ತು ನೀರು ಸರಬರಾಜು ಮೂಲಕ ಮಾತ್ರ ಬೆಳೆಗಳನ್ನು ಬೆಳೆಯುವ ವಿಧಾನ. ದುಬೈನಿಂದ ಹಿಂದಿರುಗಿದ ರಾಮ್‌ವೀರ್ ಸಿಂಗ್ ಬರೇಲಿಯಲ್ಲಿರುವ ತಮ್ಮ ಮನೆಯಲ್ಲಿ ಈ ರೀತಿಯ ಕೃಷಿಯನ್ನು ಮಾಡಬಹುದು ಎಂದು ಅರಿತುಕೊಂಡರು. ಯೋಚಿಸಿದ ತಕ್ಷಣ ಹೈಡ್ರೋಪೋನಿಕ್ಸ್ ಕೃಷಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ತರಕಾರಿ ಕೃಷಿ ಆರಂಭಿಸಿದರು.

Urban Farming: తన మూడంతస్థుల ఇంటిలో 10,000 మొక్కలు పెంచుతున్న ఉత్తరప్రదేశ్ వాసి | This Man Covered His 3-storey House In Uttar Pradesh With 10,000 Plants

ಪ್ರಸ್ತುತ 10,000 ತರಕಾರಿ ಸಸ್ಯಗಳ ಕೃಷಿ:

ರಾಮ್‌ವೀರ್ ಸಿಂಗ್ ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ಯಾವುದೇ ಕೀಟನಾಶಕಗಳನ್ನು ಬಳಸದೆ ಸಸ್ಯಗಳನ್ನು ಬೆಳೆಸಿದರು. ಹೆಚ್ಚುತ್ತಿರುವ ಉತ್ತಮ ಫಲಿತಾಂಶದಿಂದಾಗಿ, ಬರೇಲಿಯಲ್ಲಿನ ಅವರ ಮೂರು ಅಂತಸ್ತಿನ ಕಟ್ಟಡವನ್ನು ಕೃಷಿಗೆ ಮೀಸಲಿಟ್ಟರು. 750 ಚದರ ಅಡಿ ಪ್ರದೇಶದಲ್ಲಿ ಒಟ್ಟು 10,000 ತರಕಾರಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಕೊತ್ತಂಬರಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಕುಂಬಳಕಾಯಿ, ಸೋರೇಕಾಯಿ, ಟೊಮ್ಯಾಟೊ, ಹೂಕೋಸು, ಪಾಲಾಕ್, ಎಲೆಕೋಸು, ಸ್ಟ್ರಾಬೆರಿ, ಸಬ್ಬಸಿಗೆ, ಹಸಿರು ಬಟಾಣಿ ಸೇರಿದಂತೆ ಹಲವು ತರಕಾರಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ರಾಮ್‌ವೀರ್ ಅವರು ನ್ಯೂಟ್ರಿಯೆಂಟ್ ಫಿಲ್ಮ್ ಟೆಕ್ನಿಕ್ (ಎನ್‌ಎಫ್‌ಟಿ) ಮತ್ತು ಡೀಪ್ ಫ್ಲೋ ಟೆಕ್ನಿಕ್ (ಡಿಎಫ್‌ಟಿ) ಎಂಬ ಎರಡು ವಿಧಾನಗಳ ಮೂಲಕ ಬೆಳೆಯುತ್ತಾರೆ. ಈ ಮೂಲಕ ತನಗೆ ಬೇಕಾದ ತರಕಾರಿಗಳನ್ನು ಸ್ವತಃ ತಾವೇ ಬೆಳೆದು ಉಳಿದದ್ದನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಈ ಮೂಲಕ ಅವರ ಆದಾಯವೂ ಲಕ್ಷಗಳಲ್ಲಿದೆ ಎಂದು ರಾಮವೀರ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!