spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವ್ಯಕ್ತಿ ಬರೀ ಕೈನಲ್ಲೇ ಕುದಿಯೋ ಎಣ್ಣೆಗೆ ಕೈ ಹಾಕಿ ಬೋಂಡಾ ತೆಗೆಯುತ್ತಾರೆ!

- Advertisement -Nitte
  • ಮೇಘನಾ ಶೆಟ್ಟಿ, ಶಿವಮೊಗ್ಗ

ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ, ಈರುಳ್ಳಿ ಪಕೋಡ, ಆಲೂಗಡ್ಡೆ ಬಜ್ಜಿ, ಹೀರೇಕಾಯಿ ಬೋಂಡಾ, ಬಾಳೆಕಾಯಿ ಬಜ್ಜಿ, ವಡೆ, ಗೋಲಿಬಜೆ…
ಇವೆಲ್ಲವೂ ಸಂಜೆ ಸಮಯಕ್ಕೆ ಸಿಕ್ಕರೆ ಎಂಥಾ ಖುಷಿ ಅಂದರೆ, ಎಷ್ಟು ಬಿಸಿ ಇದೆ ಅಂತಲೂ ನೋಡದೇ ಸೀದಾ ಬಾಯಿಗೆ ಹಾಕೋದೇ!
ಆಮೇಲೆ ಬಾಯಲ್ಲೇ ಗಾಳಿ ಬೀಸಿಕೊಂಡು ತಿನ್ನೋದು, ಇದೆಲ್ಲಾ ಎಷ್ಟು ಬಾರಿ ಮಾಡಿದ್ದೀವಿ.. ತೀರಾ ಬಿಸಿಯಾದ್ದನ್ನು ತಿಂದು ರುಚಿ ಕೂಡ ಹೋಗಿಬಿಡುತ್ತದೆ.
ಆದರೆ ಇಲ್ಲೊಬ್ಬ ವ್ಯಕ್ತಿ ಬಿಸಿ ಬಿಸಿ ಎಣ್ಣೆಯೊಳಗೆ ಸೀದ ಕೈ ಹಾಕಿ ಬೋಂಡಾ, ಬಜ್ಜಿಯನ್ನು ತೆಗೆಯುತ್ತಾರೆ.
ಮತ್ತೆ ಹೇಳ್ತಾ ಇದ್ದೇನೆ, ಬರೀ ಕೈನಲ್ಲೇ 120 ಡಿಗ್ರಿ ಸೆಲ್ಶಿಯಸ್‌ನಲ್ಲಿ ಕುದಿಯೋ ಎಣ್ಣೆಗೆ ಕೈ ಹಾಕಿ ಬೋಂಡಾ ತೆಗೆಯುತ್ತಾರೆ!!
ಬೋಂಡಾ, ಬಜ್ಜಿ ಅಂದಮೇಲೆ ಈ ವಿಶೇಷ ವ್ಯಕ್ತಿ ಇರೋದೆ ನಮ್ಮ ದೇಶದಲ್ಲೇ ಅನ್ನೋದು ಅರ್ಥವಾಗಿರತ್ತೆ! ದೆಹಲಿಯ ಕರೋಲ್ ಭಾಗ್‌ನಲ್ಲಿದ್ದಾರೆ ನಮ್ಮ ಪ್ರೇಮ್ ಸಿಂಗ್ ಜೀ.
ಗಣೇಶ್ ರೆಸ್ಟೋರೆಂಟ್‌ನಲ್ಲಿ 26 ವರ್ಷಗಳಿಂದ ಇದೇ ಕೆಲಸವನ್ನು ಪ್ರೇಮ್ ಮಾಡುತ್ತಿದ್ದಾರೆ.

ಅಪ್ಪನಿಂದ ಕಲಿತೆ
ಒಗ್ಗರಣೆ ಹಾಕುವಾಗ ಕುದಿಯುವ ಎಣ್ಣೆ ಕೈ ಮೇಲೆ ಸಿಡಿದರೆ ಕುಣಿದಾಡುವಷ್ಟು ನೋವಾಗುತ್ತದೆ. ಹೆಣ್ಮಕ್ಕಳ ಕೈ ಒಮ್ಮೆ ನೋಡಿ, ಎಲ್ಲೆಡೆ ಬಿಸಿ ಎಣ್ಣೆ ಹಾರಿರುವ ಕಲೆ ಕಾಣುತ್ತದೆ. ಪ್ರೇಮ್ ಸಿಂಗ್ ಚಂದೆ ಗಣೇಶ್ ರೆಸ್ಟೋರೆಂಟ್ ಮಾಲೀಕರು. ಅವರು ಕೂಡ ಪ್ರೇಮ್ ರೀತಿ ಕುದಿಯುವ ಎಣ್ಣೆಗೆ ಸೀದ ಕೈ ಹಾಕಿಬಿಡುತ್ತಿದ್ದರು.

This man can keep his hand in boiling oil and nothing happens to him

ಇದೆಲ್ಲಾ ಹೇಗೆ?
ಅಪ್ಪ ಮೊದಲ ಬಾರಿ ಎಣ್ಣೆಗೆ ಕೈ ಹಾಕಿಸಿದಾಗ ನೋವಾಗಿತ್ತು, ಅದಾದ ನಂತರ ಅಭ್ಯಾಸ ಆಗಿ ಹೋಗಿದೆ. ಸಣ್ಣ ಬೊಬ್ಬೆಯಿರಲಿ, ಬಿಸಿ ಅನುಭವವೇ ಆಗೋದಿಲ್ಲ. ನನಗೆ ಸ್ಪೆಶಲ್ ಪವರ್ ಏನಿಲ್ಲ, ಇದೆಲ್ಲಾ ಅಭ್ಯಾಸ ಅಂತ ಪ್ರೇಮ್ ಹೇಳ್ತಾರೆ.

Prem Singh - Indian Cook who can fry with bare handsವೈದ್ಯರು ಏನಂತಾರೆ?
ಇವರ ಈ ವಿಚಿತ್ರ ಅಭ್ಯಾಸ ನೋಡಿದಮೇಲೆ ಎಂತವರಿಗಾದ್ರು ಒಂದು ಬಾರಿ ವೈದ್ಯರ ಬಳಿ ತೋರಿಸೋಣ ಎನಿಸುತ್ತದೆ. ಇದೇ ರೀತಿ ಪ್ರೇಮ್ ಕೂಡ ವೈದ್ಯರನ್ನು ಭೇಟಿ ಮಾಡಿದ್ದರು. ನಿಮ್ಮ ಕೈಯಲ್ಲಿ ಏನೂ ವಿಶೇಷ ಇಲ್ಲ, ಎಲ್ಲರಂತೆ ನಾರ್ಮಲ್ ಕೈ ಎಂದು ವೈದ್ಯರು ಮನೆಗೆ ಕಳುಹಿಸಿದ್ದಾರೆ.

50 Things You Need To Eat In Delhi Before You Die | Delhi NCR | Whats Hot |  WhatsHot Delhi NCR

ಬೋಂಡ ಎತ್ತೋದನ್ನ ನೋಡೋಕೆ ಬರ‍್ತಾರೆ
ಇಲ್ಲಿ ಜನ ಬೋಂಡ ತಿನ್ನೋದಕ್ಕೆ ಬರೋದಕ್ಕಿಂತ ಬೋಂಡ ಎತ್ತೋದನ್ನು ನೋಡೋದಕ್ಕೆ ಬರುತ್ತಾರೆ. ಪ್ರೇಮ್ ಅವರು ಎಣ್ಣೆಗೆ ಕೈ ಹಾಕಿ ಬೋಂಡಾ ತೆಗೆಯೋದನ್ನು ನೋಡಿದ ಮೇಲೆ ಬೋಂಡಾ ಕೊಳ್ಳುತ್ತಾರೆ.

ಜೀನ್ಸ್‌ನಲ್ಲೇ ಇದೆಯಾ?
ತಂದೆಗೆ ಇದ್ದ ಪವರ್ ಮಗನಿಗೆ ಬಂದಿದೆ. ಇದೀಗ ಪ್ರೇಮ್ ಅವರ ಪುತ್ರ ದೀಪಕ್ ಕೂಡ ಎಣ್ಣೆಗೆ ಕೈ ಹಾಕ್ತಾರಾ?
ಈ ಬಗ್ಗೆ ದೀಪಕ್ ಮಾತನಾಡ್ತಾರೆ. ಇದುವರೆಗೂ ನಾನು ಎಂದಿಗೂ ಕೈ ಹಾಕಿಲ್ಲ. ಮುಂದೆ ಹಾಕಬಹುದೇನೋ ಗೊತ್ತಿಲ್ಲ ಎಂದಿದ್ದಾರೆ.

Ganesh Restaurant – Delhi Food Walksಜಗತ್ತಿನಲ್ಲಿ ನಮಗೆ ತಿಳಿಯದ್ದು ಎಷ್ಟೋ ಇದೆ, ಸೈನ್ಸ್‌ಗೆ ನಿಲುಕದ್ದೂ ತುಂಬಾನೇ ಇದೆ. ಇಂಥ ವಿಷಯಗಳ ಬಗ್ಗೆ ತಿಳಿದಾಗ ಇದೆಲ್ಲಾ ಹೇಗೆ ಸಾಧ್ಯ ಎನಿಸುತ್ತದೆ. ಒಂದು ಹನಿ ಎಣ್ಣೆ ಹಾರಿದರೆ ಬೊಬ್ಬೆ ಬರುವ ಜನರಲ್ಲಿ, ಎಣ್ಣೆಗೆ ಕೈ ಎದ್ದುವ ಪ್ರೇಮ್ ಸಿಂಗ್ ವಿಭಿನ್ನವಾಗಿ ನಿಲ್ಲುತ್ತಾರೆ!

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss