ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ನಿದ್ದೆ ಬರೋದಿಲ್ಲ ಅನ್ನೋದು ಹಲವರ ಕಾಯಿಲೆಯಾದರೆ, ಅತಿಯಾದ ನಿದ್ದೆ ಇವರ ಕಾಯಿಲೆ!
ಅತಿ ಎಂದರೆ ಅಷ್ಟಿಷ್ಟಲ್ಲ, ವರ್ಷಕ್ಕೆ 300 ದಿನ ಈ ವ್ಯಕ್ತಿ ನಿದ್ದೆಯಲ್ಲೇ ಕಳೆಯುತ್ತಾರೆ.
ಯಾರೀ ವ್ಯಕ್ತಿ? ಯಾವುದೀ ರೋಗ?
ಹೌದು, ರಾಜಸ್ಥಾನದ ಜೋಧಪುರದಲ್ಲಿರುವ ಪುರ್ಖಾರಾಮ್ಗೆ ‘ಆಕ್ಸಿಸ್ ಹೈಪರ್ಸೋಮ್ನಿಯಾ’ ಕಾಯಿಲೆ ಇದೆ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಕಾಯಿಲೆ. ಈ ಸಮಸ್ಯೆ ಇರುವ ಮನುಷ್ಯರು ತಮ್ಮ ಜೀವಿತಾವಧಿಯ ಹೆಚ್ಚು ಸಮಯವನ್ನು ನಿದ್ದೆಯಲ್ಲಿಯೇ ಕಳೆಯುತ್ತಾರೆ.
ಪುರ್ಖಾರಾಮ್ಗೆ ಈಗ 42 ವರ್ಷ, ಅವರು 25 ವರ್ಷದವರಿದ್ದಾಗ ಹೈಪರ್ಸೋಮ್ನಿಯಾ ಕಾಯಿಲೆಗೆ ತುತ್ತಾಗಿದ್ದಾರೆ. ಮೊದಲು ಒಂದು ವಾರದ ನಿದ್ದೆಯಿಂದ ಆರಂಭವಾದ ಕಾಯಿಲೆ ಇದೀಗ ವರ್ಷಕ್ಕೆ 300 ದಿನದವರೆಗೆ ಬಂದಿದೆ. ನಿದ್ರೆಗೆ ಜಾರುವ ಮುನ್ನ ಪುರ್ಖಾರಾಮ್ಗೆ ಹೆಚ್ಚು ತಲೆನೋವು ಬರುತ್ತದೆ. ನಿದ್ದೆ ಮಂಪರಿನಲ್ಲೇ ಮನೆಯವರು ಅವರಿಗೆ ಊಟ ಮಾಡಿಸುತ್ತಾರೆ. ಮೊದಲು ಹೆದರಿದ ಪೋಷಕರು ವೈದರಲ್ಲಿ ಕರೆದೊಯ್ದಾಗ ವೈದ್ಯರು ಇದೊಂದು ಅಪರೂಪದಲ್ಲಿ ಅಪರೂಪದ ಕಾಯಿಲೆ ಎಂದು ಹೇಳಿದ್ದಾರೆ.
ಈ ಕಾಯಿಲೆ ಎಂದು ಹೋಗುತ್ತದೋ ಎಂದ ಪುರ್ಖಾರಾಮ್ ತಾಯಿ ಕಾಯುತ್ತಿದ್ದಾರೆ.