Sunday, April 18, 2021

Latest Posts

ವೃದ್ಧ ದಂಪತಿಗೆ ಹೊಸ ಜೀವನಕೊಟ್ಟ ಮಾವಿನಕಾಯಿ, ಈ ಅಪ್ಪೆ ಮಿಡಿ ಸ್ಟೋರಿ ಓದಿ ಬೆರಗಾಗ್ತೀರ..

ಬೇಸಿಗೆ ಬಂದ್ರೆ ಸಾಕು ಮಾವಿನಹಣ್ಣಿನದ್ದೇ ಸಂಭ್ರಮ. ಮಾವಿನಕಾಯಿಗೆ ಉಪ್ಪು, ಖಾರ ಹಚ್ಚಿ ತಿನ್ನೋದು, ಮಾವಿನ ಹಣ್ಣಿನ ಸೀಕರಣೆ, ರಸಾಯನ ಹೀಗೆ.. ಇಂಥ ಮಾವಿನಕಾಯಿಯನ್ನೇ ಆಧಾರ ಮಾಡಿಕೊಂಡು ಜನ ಜೀವನ ಮಾಡ್ತಾರೆ ಅಂದ್ರೆ ನಂಬ್ತೀರಾ? ನಂಬಲ್ಲಾ ಅನ್ನೋರು ಈ ಸ್ಟೋರಿ ಓದಲೇಬೇಕು. ವೃದ್ಧರೊಬ್ಬರು ಮಾವಿನ ಕಾಯಿ ಬೆಳೆದು ಹೇಗೆ ಜೀವನ ಮಾಡ್ತಿದ್ದಾರೆ ಗೊತ್ತಾ?

ಇವರ ಹೆಸರು ಬೇಲೂರು ಸುಬ್ಬಣ್ಣ ಹೆಗ್ಗಡೆ(84). ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು. ಇವರು ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 100 ಹಳ್ಳಿಗಳಿಗೆ ಭೇಟಿ ನೀಡಿ 100 ವಿವಿಧ ರೀತಿಯ ಮಿಡಿ ಮಾವಿನಕಾಯಿ ಸಸಿಗಳನ್ನು ಸಂಗ್ರಹಿಸಿದ್ದಾರೆ.

ಇದನ್ನ ಬೆಳೆಯೋಕೆ ಅವರ ಹತ್ತಿರ ತೋಟ ಇಲ್ವಂತೆ ಬದಲಿಗೆ ಅವುಗಳನ್ನು ತಮ್ಮ ಮನೆಯ ಸುತ್ತ ಇರುವ 1 ಎಕರೆ ಉದ್ಯಾನವನದಲ್ಲೇ ಮರಗಳ ಪೋಷಣೆ ಮಾಡುತ್ತಿದ್ದಾರೆ. ಸ್ಥಳದ ಅಭಾವದಿಂದ ಇರುವ ಜಾಗದಲ್ಲೇ ಸುಬ್ಬಣ್ಣನ ಪತ್ನಿ ಪ್ರತಿ ಮರದ ಮೇಲೂ ವಿವಿಧ ಪ್ರಭೇದದ ಮಾವನ್ನು ಕಸಿ ಮಾಡುತ್ತಾರೆ. ಇದರಿಂದ ಕಡಿಮೆ ಸ್ಥಳಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಯಲು ಸಾಧ್ಯವಾಗುತ್ತಿದೆ.

ನಾನು ನನ್ನ ಪತ್ನಿ ಇಬ್ಬರೂ ಕಳೆದು 12 ವರ್ಷಗಳಲ್ಲಿ ಪಶ್ಚಿಮ ಘಟ್ಟದ ಮೂಲೆ ಮೂಲೆಗಳಿಗೆ ಹೋಗಿ 100 ಹಳ್ಳಿಗಳಿಗೆ ಭೇಟಿ ಮಾಡಿದ್ದೇವೆ. ಅಲ್ಲಿಂದ ಕೆಲವು ಮಾವಿನಕಾಯಿಯನ್ನು ತಂದು ಮನೆಯಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದೆವು.. ರುಚಿ ಚೆನ್ನಾಗಿದ್ದರೆ ಮತ್ತೆ ಹಳ್ಳಿಗಳಿಗೆ ಭೇಟಿ ನೀಡಿ ಕಸಿ ಮಾಡಲು ಸಸಿ ತರುತ್ತಿದ್ದೆವು ಎನ್ನುತ್ತಾರೆ ಸುಬ್ಬಣ್ಣ.

ರಾಜ್ಯದಲ್ಲಿ ಮಾವಿನ ಅನೇಕ ಪ್ರಭೇದಗಳು ನಾಶವಾಗಿರುವುದರಿಂದ ಬೇಸರಗೊಂಡ ಸುಬ್ಬಣ್ಣ ಅವರು, ಮಲೆನಾಡಿನ ಜನಪ್ರಿಯ ಅಪ್ಪೆ ಮಿಡಿ ಮಾವಿನಕಾಯಿ ಬೆಳೆಯುತ್ತಿದ್ದಾರೆ. ಸುಮಾರು 10 ವಿಭಿನ್ನ ಪ್ರಭೇದದ ಡೊಂಬೇಸರಾ ಜೀರಿಜ್, ಜಿನಾಸಿನಕುಡು ಜೀರೆಜ್, ಚೀನ್ ಥೋಟಾ ಜೀರೆಜ್, ಬಾಗಿ ಜೀರಜ್ ಗಳಂತಹ ರುಚಿ ರುಚಿ ಮಾವು ಬೆಳೆಗಳನ್ನು ಬೆಳೆಯುತ್ತಿರುವುದು ವಿಶೇಷ.

Imageವ್ಯಾಪಾರ, ವಹಿವಾಟು ಮಾಡಿ ಹಣ ಸಂಪಾದಿಸಲು ಸುಬ್ಬಣ್ಣ ಅವರು ಈ ಕೆಲಸ ಮಾಡುತ್ತಿಲ್ಲ. ಬದಲಿಗೆ ತೋಟಗಾರಿಕೆಯ ಆಸಕ್ತಿ ಇರುವವರಿಗೆ ಉಚಿತ ಬೀಜ, ಸಸ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಇವರ ಈ ಸಾಧನೆಯನ್ನು ಮೆಚ್ಚಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸುಬ್ಬಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದ್ದು, ಅವರಿಂದ ಸುಮಾರು 30 ವಿವಿಧ ಅಪ್ಪೆ ಮಿಡಿಯನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ 200ಕ್ಕೂ ಹೆಚ್ಚು ಅಪ್ಪೆ ಮಿಡಿ ಮಾವನ್ನು ಪಡೆಯುವ ಭರವಸೆಯನ್ನೂ ನೀಡಿರುವುದು ಸಂತಸದ ಸಂಗತಿಯಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss