Wednesday, August 17, 2022

Latest Posts

ರಾಜಕೀಯ ಬಿಟ್ಟು ಬಿಗ್‌ಬಾಸ್ ಮನೆಗೆ ಹೋಗುತ್ತೇನೆ ಎಂದ್ರು ಹಳ್ಳಿ ಹಕ್ಕಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಈಗಾಗಲೇ ಆರಂಭವಾಗಿದ್ದು, ಬಿಗ್‌ಬಾಸ್ ಮನೆಗೆ ಹೋಗ್ತಿನಿ ಎಂದು ಇಲ್ಲೊಬ್ಬರು ರಾಜಕಾರಣಿ ಹೇಳಿದ್ದಾರೆ.
ವಿ.ಪ. ಸದಸ್ಯ ಎಚ್. ವಿಶ್ವನಾಥ್ ಅವರು ಬಿಗ್‌ಬಾಸ್ ಮನೆಗೆ ಹೋಗುವ ಇಂಗಿತವನ್ನು ಹೊರಹಾಕಿದ್ದಾರೆ.


ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆಯೂ ನನಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ದೊರೆತಿತ್ತು. ಆದರೆ ಆ ಸಮಯದಲ್ಲಿ ಹೋಗಲು ನನಗೆ ಆಗಿರಲಿಲ್ಲ. ಇದೀಗ ಮತ್ತೇನಾದರೂ ಕರೆ ಮಾಡಿ ಬಿಗ್‌ಬಾಸ್‌ಗೆ ಬನ್ನಿ ಎಂದರೆ ಹೋಗಿ ನಾಲ್ಕೈದು ದಿನ ಇದ್ದು ಬರುತ್ತೇನೆ ಎಂದು ಹೇಳಿದ್ದಾರೆ.
ಅಲ್ಲಿರುವವರಿಗೆ ಸ್ವಲ್ಪ ರಾಜಕೀಯ ಪಾಠದ ಅವಶ್ಯಕತೆ ಇದೆ. ಕರೆದರೆ ಈ ಬಾರಿ ಖಂಡಿತ ಹೋಗಿ ಬರುತ್ತೇನೆ ಎಂದು ಹಳ್ಳಿ ಹಕ್ಕಿ ವಿಶ್ವನಾಥ್ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!