Sunday, July 3, 2022

Latest Posts

ಕೃಷಿ ತ್ಯಾಜ್ಯದಿಂದ ತಯಾರಾಗ್ತಿದೆ ಜೀನ್ಸ್‌ ಪ್ಯಾಂಟ್‌ ಗಳು! ಈ ವಿಶೇಷ ಕಾನ್ಸೆಪ್ಟ್‌ ಹೇಗಿದೆ ಗೊತ್ತಾ?

  • ಹಿತೈಷಿ

ನೀವು ಇತ್ತೀಚೆಗೆ ತಗೊಂಡ ಜೀನ್ಸ್ ಪ್ಯಾಂಟ್ ನ ರೇಟ್ ಎಷ್ಟು? ಕಡಿಮೆ ಅಂದ್ರೆ 750ರೂ. ಇರುತ್ತೆ. ಒಳ್ಳೆ ಕ್ವಾಲಿಟಿ, ಬ್ರ್ಯಾಂಡ್ ಅಂತೆಲ್ಲಾ ಹೋದ್ರೆ 5 ಸಾವಿರ ರೂ. ದಾಟುತ್ತೆ.

ಯಾಕೆ ಅಂತ ಗೊತ್ತಾ?
ಸುಮ್ಮನೆ ಉದಾರಣೆಗೆ ನೀವು ಒಂದು ಟೀ ಶರ್ಟ್ ತಯಾರಿಸಬೇಕು ಅಂದ್ರೆ ಕನಿಷ್ಠ ಅಂದ್ರು 2700 ಲೀಟರ್ ನೀರು ಬೇಕಾಗುತ್ತೆ. ಇನ್ನೂ ಜೀನ್ಸ್ ಪ್ಯಾಂಟ್ ತಯಾರಿಸಬೇಕಂದ್ರೆ 7500 ರಿಂದ 10 ಸಾವಿರ ಲೀಟರ್ ನೀರು ಬೇಕಾಗುತ್ತೆ!

Canvaloop hemp slow jeans
ಅಂದ್ರೆ ಒಂದು ಪ್ಯಾಂಟ್ ತಯಾರಿಸೋಕೆ ಒಬ್ಬ ವ್ಯಕ್ತಿ ಹತ್ತು ವರ್ಷಗಳ ಕಾಲ ಕುಡಿಯುವ ನೀರಿಗೆ ಸಮ. ಒಂದು ಜೀನ್ಸ್ ಪ್ಯಾಂಟ್ ಗೆ ಕನಿಷ್ಠ 1 ಕೆಜಿ ಹತ್ತಿ ಬೇಕಾಗುತ್ತೆ. ಆದ್ರೆ ಇದನ್ನ ತಯಾರಿಸುವಾಗ ಹೊರಬರುವ ಇಂಗಾಲ ಹೊರಸೂಸುವಿಕೆ ಪ್ರಮಾಣ ಜಾಗತಿಕ ಮಟ್ಟದಲ್ಲಿ ಶೇ.10ರಷ್ಟಿದೆ.

ಆದರೆ ಇಲ್ಲೊಬ್ಬ ವ್ಯಕ್ತಿ ಜವಳಿ ಉದ್ಯಮವನ್ನೇ ಪ್ರಮುಖವಾಗಿಸಿಕೊಂಡು ಪರಿಸರ ಸ್ನೇಹಿ ಬಟ್ಟೆ ಸಿದ್ಧಪಡಿಸೋಕೆ ಶುರು ಮಾಡಿದ್ರು.
ಇವರು ಮೂಲತಃ ಸೂರತ್ ನವರು, ಹೆಸರು ಶ್ರೇಯಾನ್ಸ್ ಕೋಕ್ರಾ. ಅಮೆರಿಕದಲ್ಲಿ ಹೆಚ್ಚಿನ ಅಧ್ಯಯನ ಮಾಡಿ ತಾಯಿನಾಡಿಗೆ ವಾಪಾಸ್ ಆದವರು.

Canvaloop hemp slow jeans

ಇಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ?
ಈತ ಅನಾನಸ್, ಬಾಳೆಹಣ್ಣು ಮತ್ತು ಸೆಣಬಿನ ಕೃಷಿ ತಾಜ್ಯಗಳ್ನು ಫೈಬರ್ ಆಗಿ ಪರಿವರ್ತಿಸುವ ಯಂತ್ರವನ್ನು ಸಿದ್ಧಪಡಿಸಿದ್ರು. ಇದರಿಂದ ದೊಡ್ಡ ದೊಡ್ಡ ಜವಳಿ ಉತ್ಪಾದನಾ ಸಂಸ್ಥೆಗಳು ವೆಚ್ಚ ಮಾಡುತ್ತಿದ್ದ 10 ಸಾವಿರ ಲೀಟರ್ ಅನ್ನು ಕೇವಲ 10 ಲೀಟರ್ ಗೆ ಇಳಿಸುವಲ್ಲಿ ಯಶಸ್ವಿಯಾದ್ರು.

Canvaloop hemp slow jeans

ಯಾವ ಸಂಸ್ಥೆ?
ಜವಳಿ ಉದ್ಯಮದಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ಗಮನಿಸಿದ ಶ್ರೇಯಾನ್ಸ್, 2017ರಲ್ಲಿ ಕ್ಯಾನ್ವಾಲೂಪ್ ಅನ್ನುವ ಸ್ಟಾರ್ಟ್ ಅಪ್ ಸಂಸ್ಥೆ ಸ್ಥಾಪಿಸಿದರು.

ಮತ್ತೇನು ವಿಶೇಷತೆ?
ಇಲ್ಲಿ ಹಸಿ ತ್ಯಾಜ್ಯಗಳನ್ನೇ ಬಳಸುವುದರಿಂದ ಹೆಚ್ಚು ನೀರಿನ ಅಗತ್ಯ ಬೀಳುವುದಿಲ್ಲ. ಉದಾ: ಬಾಳೆ ಕಾಂಡವನ್ನು ಕತ್ತರಿಸಿ ಅದರಲ್ಲಿನ ನೀರು ತೆಗೆಯಲು ಒಣಗಿಸಲಾಗುತ್ತದೆ. ಈ ಮೂಲಕ ಯಾವುದೇ ಹೆಚ್ಚಿನ ನೀರನ್ನು ವೇಸ್ಟ್ ಮಾಡದೇ ಕಚ್ಚಾ ಫೈಬರ್ ಅನ್ನು ಗಳಿಸಬಹುದಾಗಿದೆ.

First Homegrown Hemp Jeans Is Re-imagining Fashion For A More Eco-friendly World - Homegrown

ನಂತರ ಈ ಫೈಬರ್ ಅನ್ನು ಜೀವರಾಸಾಯನಿಕಗಳ ಜತೆ ಬೆರಸಲಾಗುತ್ತೆ. ಇದರಿಂದ ಫೈಬರ್ ಮೃದುವಾಗಿ ಹತ್ತಿಯಂತೆಯೇ ಆಗುತ್ತದೆ. ನಂತರ ಸಂಸ್ಕರಿಸಿದ ವಸ್ತುವನ್ನು ನೇಯಲು ಹಾಗೂ ಜವಳಿಯಾಗಿಸಲು ವಿಶೇಷ ಯಂತ್ರವನ್ನೂ ಅಭಿವೃದ್ಧಿಗೊಳಿಸಿದ್ದಾರೆ ಶ್ರೆಯಾನ್ಸ್.

Canvaloop hemp slow jeans

ಹೇಗಿರುತ್ತೆ ಜೀನ್ಸ್ ಕ್ವಾಲಿಟಿ?
ಇದನ್ನು ಕೃಷಿ ತ್ಯಾಜ್ಯದಿಂದ ಮಾಡಿರುವುದರಿಂದ ವಸ್ತುಗಳು ಹೆಚ್ಚು ದಿನ ಬಾಳಿಕೆಬರುತ್ತೆ. ಎಷ್ಟೇ ಸಲ ವಾಷ್ ಮಾಡಿದರು ಇದರ ಕ್ವಾಲಿಟಿ ಕಡಿಮೆಯಾಗಲ್ಲ ಅನ್ನುತ್ತಾರೆ ಶ್ರೇಯಾನ್ಸ್.

ಇಷ್ಟಕ್ಕೂ ಇದರ ತ್ಯಾಜ್ಯ ಏನು?
ಇಷ್ಟೆಲ್ಲಾ ಕೃಷಿ ತ್ಯಾಜ್ಯಗಳಿಂದ ಮಾಡುತ್ತಿರುವ ಈ ಜೀನ್ಸ್ ತಯಾರಿಕೆಯಲ್ಲಿ ಯಾವುದೇ ವೇಸ್ಟ್ ಉತ್ಪಾದನೆಯಾಗುವುದಿಲ್ಲ. ಜತೆಗೆ ಇಲ್ಲಿ ಯಾವುದೇ ರಾಸಾಯನಿಕ, ಕೀಟನಾಶಕಗಳ ಬಳಕೆಯಾಗುವುದಿಲ್ಲ. 10 ಸಾವಿರ ಲೀಟರ್ ನೀರು ಬಳಕೆಯಾಗುವ ಕಡೆ ಕೇವಲ 10 ಲೀಟರ್ ನೀರು ಬಳಕೆ ಮಾಡ್ತಾರೆ ಶ್ರೇಯಾನ್ಸ್.

Canvaloop

ಸಂಸ್ಥೆಯ ಕಾರ್ಯಾಚರಣೆ ಹೇಗೆ?
ಹಿಮಾಚಲ ಪ್ರದೇಶ, ಅಸ್ಸಾಂ, ಉತ್ತರಾಖಂಡ ಸೇರಿದಮತೆ ಹಲವು ಪ್ರದೇಶಗಳ ರೈತರಿಂದ ಕೃಷಿ ತ್ಯಾಜ್ಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆ ನೀಡಿದೆ.

Slow' - High Performance Himalayan Hemp Jeans. by Slow by Canvaloop — Kickstarterಈಗಾಗಲೇ ಈ ಸಂಸ್ಥೆ ತಿಂಗಳಿಗೆ ಸುಮಾರು 80 ಟನ್ ಫೈಬರ್ ಉತ್ಪಾದಿಸುತ್ತಿದೆ. ಇದನ್ನು ಜಾಗತಿಕ ಬ್ರ್ಯಾಂಡ್ ಗಳಾದ ಅರವಿಂದ್ ಟೆಕ್ಸ್‌ಟೈಲ್ಸ್, ಲೆವಿಸ್, ಟಾರ್ಗೆಟ್, ಎಚ್ &ಎಂ ಬಟ್ಟೆಗಳಿಗೆ ಬಳಸಲಾಗುತ್ತಿದೆ.
ಜವಳಿ ಮಾರುಕಟ್ಟೆಯಲ್ಲೇ ಒಂದು ಹೊಸ ಸವಾಲು ಹಾಗೂ ಗುರಿ ಮೂಲಕ ಶ್ರೇಯಾನ್ಸ್ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss