Friday, August 19, 2022

Latest Posts

ಕೊರೋನಾದಿಂದ ಚೇತರಿಕೆ ಕಂಡ ವಿದ್ಯಾರ್ಥಿ ಖಿನ್ನತೆಯಿಂದ ಆತ್ಮಹತ್ಯೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಬಾಧಿಸಿ ಚೇತರಿಕೆ ಕಂಡಿದ್ದ ವ್ಯಕ್ತಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅರವಂತಿಕೆಪಾಳ್ಯ ನಿವಾಸಿಯಾದ ಸುನಿಲ್ ಕುಮಾರ್( 22 ) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಟೆಕ್ ಓದುತ್ತಿದ್ದ ವಿದ್ಯಾರ್ಥಿ ಶುಕ್ರವಾರ ಸಂಜೆ ಆರು ಗಂಟೆಗೆ ಮನೆಯಿಂದ ತೆರಳಿದ್ದರು. ವಾಕಿಂಗ್ ಹೋಗುವುದಾಗಿ ತಾಯಿಗೆ ಹೇಳಿ ತೆರಳಿದ್ದಾನೆ.
ನಂತರ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂದು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿದ್ದು, ನಾಲ್ಕು ದಿನ ಆಸ್ಪತ್ರೆಯಲ್ಲಿ ಇದ್ದರು. ಅದಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!