ಇದೇ ಭಾನುವಾರದಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಗೋವಾ ಘಟಕದ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

ಹೊಸದಿಗಂತ ವರದಿ ಮಂಗಳೂರು:

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಗೋವಾ ಘಟಕದ ದ್ವಿತೀಯ ವಾರ್ಷಿಕೋತ್ಸವವು ಜೂ.22ರ ಭಾನುವಾರ ಅಪರಾಹ್ನ3 ಗಂಟೆಗೆ ಪಣಜಿಯ ಇನ್‌ಸ್ಟಿಟ್ಯೂಟ್ ಮೆನೇಜಸ್ ಬ್ರಗಾಂಜಾ ಸಭಾಗೃಹದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ಉದ್ಘಾಟಿಸಲಿದ್ದಾರೆ.  ಪರ್ವರಿಯ ಶ್ರೀ ಸಿದ್ಧಾರೂಢ ಮಠದ ಶ್ರೀ ಗಣೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ, ಗೋವಾ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್.ಧ್ರುವಕುಮಾರ್ , ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರು ಉಪಸ್ಥಿತರಿರುವರು.

ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಬೆಳುವಾಯಿ, ಗೋವಾ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ಅಮಿನ್ ಬಂಟ್ವಾಳ, ಪಟ್ಲ ಫೌಂಡೇಶನ್‌ನ ಗೋವಾ ಘಟಕದ ಗೌರವಾಧ್ಯಕ್ಷ ವಿಜಯೇಂದ್ರ ಶೆಟ್ಟಿ, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ ಕುಮಾರ್, ಪಟ್ಲ ಫೌಂಡೇಶನ್‌ನ ಪಳ್ಳಿ ಅಧ್ಯಕ್ಷ ಸುನೀಲ್ ಶೆಟ್ಟಿ ಪಳ್ಳಿ, ಉದ್ಯಮಿ ಭರತ್ ಹೆಗ್ಡೆ, ಗೋವಾ ಬಂಟರ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ, ಗೋವಾ ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷ ಪ್ರಕಾಶ ಪೂಜಾರಿ, ಮ್ಯಾಥ್ಯೂಸ್ ಗ್ರೂಪ್ ಗೋವಾ ಇದರ ಸಿಇಒ ಮಲ್ಲಿಕಾರ್ಜುನ ಬಾದಾಮಿ, ಗೋವಾ ಯಕ್ಷಕಲಾ ಮಿತ್ರಕೂಟದ ಅಧ್ಯಕ್ಷ ವಿನಾಯಕ ಅವಧಾನಿ, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ, ಗೋವಾ ಬಂಟರ ಸಂಘದ ಶಶಿಧರ , ಪ್ರಶಾಂತ್ ಜೈನ್, ಅಶೋಕ್ ಶೆಟ್ಟಿ, ರಾಘವೇಂದ್ರ ಉಡುಪ, ಮೋಹನದಾಶ್ ಶೆಟ್ಟಿ, ಜಗದೀಶ್ ಶೆಟ್ಟಿ ಪಳ್ಳಿ, ಅನಿಲ್ ವಿ.ಪೂಜಾರಿ, ಶಶಿಧರ ರೈ, ಗೋವಾ ಸಂಸ್ಕೃತ ವಿದ್ವಾನ್ ಮಹಾಬಲ ಭಟ್ ಉಪಸ್ಥಿತರಿರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!