ಉಪ್ಪು ಹೆಚ್ಚು ಸೇವಿಸುವುದು ಅಪಾಯ, ಈ ಕಾಯಿಲೆಗಳಿಗೆ ತುತ್ತಾಗಬಹುದು ಎಚ್ಚರ ವಹಿಸಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಮಾತಿದೆ.. ನಾವು ಸೇವಿಸುವ ಯಾವುದೇ ಆಹಾರದಲ್ಲಿ ಉಪ್ಪಿನಾಂಶ ಇರೇಲೇ ಬೇಕು. ಉಪ್ಪಿಲ್ಲದೆ ಯಾವುದೇ ಆಹಾರವೂ ಪರಿಪೂರ್ಣವಲ್ಲ. ಉಳಿದ ಎಷ್ಟೇ ಪದಾರ್ಥಹಾಕಿ ಮಾಡಿರಲಿ ಉಪ್ಪೊಂದು ಇಲ್ಲದಿದ್ದರೆ ಅದು ಸಪ್ಪೆಯಾಗಿರುತ್ತದೆ. ಜೊತೆಗೆ ಉಪ್ಪು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಉಪ್ಪಿನಿಂದಲೇ ದೇಹಕ್ಕೆ ಅಯೋಡಿನ್ ಅಂಶ ಪೂರೈಕೆಯಾಗುತ್ತದೆ. ಜೊತೆಗೆ ಥೈರಾಯ್ಡ್​ ಗ್ರಂಥಿಯನ್ನು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿನ ದ್ರವದ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಉಪ್ಪಿನಿಂದ ಇಷ್ಟೆಲ್ಲಾ ಪ್ರಯೋಜನವಿದ್ದರೂ ಅದರ ಅತಿಯಾದ ಸೇವನೆ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀರುತ್ತದೆ. ಹಾಗಿದ್ದರೆ ಹೆಚ್ಚಾಗಿ ಉಪ್ಪು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳೇನು ತಿಳಿದುಕೊಳ್ಳೋಣ.
ಮಾನವನ ದೇಹಕ್ಕೆ ಪ್ರತಿದಿನ ಸುಮಾರು 500 ಮಿಗ್ರಾಂ ಉಪ್ಪಿನಾಂಶದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.  ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ದಿನಕ್ಕೆ 1.5 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸುವುದು ಹಾನಿಕಾರಕ. ಆದರೆ ಆಹಾರದಲ್ಲಿ ಹೆಚ್ಚು ಉಪ್ಪಿನಾಂಶ ವಿದ್ದರೆ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಜೊತೆಗೆ ಇದು ಕ್ಯಾಲ್ಸಿಯಂ ನಷ್ಟವನ್ನು ಉಂಟುಮಾಡಬಹುದು, ಅವುಗಳಲ್ಲಿ ಕೆಲವು ಮೂಳೆ ಸವೆಯುವುದಂತಹ ಗಂಭೀರ ಸಮಸ್ಯೆಗಳೂ ಇವೆ. ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಅಪಧಮನಿಗಳ ಕಿರಿದಾಗುತ್ತದೆ. ಇದರಿಂದ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಆದ್ದರಿಂದ ಉಪ್ಪಿನ ಸೇವನೆಯನ್ನು ಮಿತಗೊಳಿಸುವ ಮೂಲಕ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!