ಈ ಬಾರಿ ಅರಮನೆ ಆವರಣದಲ್ಲಿ 50ನೇ ವಾರ್ಷಿಕ ಕೇಕ್ ಶೋ: ಥೀಮ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈ ಬಾರಿಯ ಕ್ರಿಸ್‌ಮಸ್ ಆಚರಣೆಗೆ ದಿನಗಣನೆ ಶುರುವಾಗಿದ್ದು, ಹಬ್ಬ ಬರಮಾಡಿಕೊಳ್ಳಲು ಸಮುದಾಯದವರು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ವಾರ್ಷಿಕ ಕೇಕ್ ಪ್ರದರ್ಶನಕ್ಕೆ 50 ವರ್ಷ ಆಗಿರುವ ಹಿನ್ನೆಲೆ ಈ ಭಾರಿ ಅರಮನೆ ಮೈದಾನದಲ್ಲಿ ಅದ್ಧೂರಿ ಕೇಕ್ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರತಿ ವರ್ಷ ಸೆಂಟ್ ಜೋಸೆಪ್ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಬೃಹತ್ ಕೇಕ್ ಪ್ರದರ್ಶನವನ್ನು ಈ ಸಲ ಅರಮನೆ ಆವರಣದ ತ್ರಿಪುರಾ ವಾಸಿನಿಯಲ್ಲಿ ಸುಮಾರು 20,000 ಚದರ ಕಿ ಲೋ ಮೀಟರ್ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಮತ್ತು ಮೈಬೇಕರ್ಸ್‌ ಮಾರ್ಟ್‌ ಈ ಪ್ರದರ್ಶನ ಆಯೋಜಿಸಿದೆ.

20 ಅಡಿ ಎತ್ತರದ ಕ್ರಿಸ್ ಮಸ್ ಟ್ರೀ, ಒಟ್ಟು 850 ಕೆ.ಜಿ. ತೂಕದ ರಾಮ ಮಂದಿರ ಸೇರಿದಂತೆ 20 ಮಾದರಿಯ ಕೇಕ್ ಪ್ರದರ್ಶನ ಇರಲಿದೆ. ಕಲಾವಿದರು ತುಂಬಾ ಶ್ರಮಪಟ್ಟು ಈ ಕೇಕ್ ಗಳನ್ನು ತಯಾರಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!