Thursday, August 11, 2022

Latest Posts

ಮಹಿಳೆಗೆ ಫ್ಲಾಟ್, ಹಣ ನೀಡಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ: ರಮೇಶ್ ಜಾರಕಿಹೊಳಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ. ಸಿಡಿ ನೂರಕ್ಕೆ ನೂರರಷ್ಟು ನಕಲಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಏಳಿಗೆಯನ್ನು ಎಲ್ಲರೂ ಸಹಿಸುವುದಿಲ್ಲ, ಈ ರೀತಿಯಾದ ಷಡ್ಯಂತ್ರ ನಡೆಸಿ ನನ್ನ ಹೆಸರು ಕೆಡಿಸುವ ಯತ್ನ ಮಾಡಿದ್ದಾರೆ. ಈ ಸಿಡಿ ವಿಷಯ ನನಗೆ ಈಗ ತಿಳಿದಿದ್ದಲ್ಲ, ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು. ಆದರೆ ತಪ್ಪೇ ಮಾಡದ ನಾನು ಏಕೆ ಹೆದರಬೇಕು? ಅದಕ್ಕೆ ಸುಮ್ಮನಿದ್ದೆ ಎಂದರು.
ನಾನು ತಪ್ಪು ಮಾಡಿದ್ದೇನೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟೆ. ನನಗೆ ರಾಜಕೀಯಕ್ಕಿಂತ ಕುಟುಂಬದ ಮರ್ಯಾದೆ ಮುಖ್ಯ ಎಂದರು.
ಇದರ ಹಿಂದೆ ಪ್ರಭಾವಿ ನಾಯಕನ ಕುತಂತ್ರ ಇದೆ. ಅವರ ಜೊತೆಗಾರರು ಇದನ್ನೆಲ್ಲ ಮಾಡಿದ್ದಾರೆ. ನನ್ನ ಮೇಲೆ ಈ ಆರೋಪ ಹೊರಿಸಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಮಹಿಳೆಗೆ ಆಮಿಷವೊಡ್ಡಿ ಇದನ್ನು ಮಾಡಲಾಗಿದೆ. ಆಕೆಗೆ ಐದು ಕೋಟಿ ಹಣ, ಎರಡು ಫ್ಲಾಟ್ ಕೂಡ ನೀಡಲಾಗಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss