ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರಿಗೆ ಅಡುಗೆ ಮಾಡಿಯಾದ ಮೇಲೆ ಪಾತ್ರ ತೊಳೆಯುವುದೇ ದೊಡ್ಡ ಕಷ್ಟದ ಕೆಲಸ. ಪಾತ್ರೆಗೆ ಲಿಕ್ವಿಡ್ ಅಥವಾ ಸೋಪ್ ಬಳಸಿ ತೊಳೆಯಬಹುದು. ಇದರಿಂದ ಅನೇಕರಿಗೆ ಕೈ ಚರ್ಮದ ಮೇಲೆ ಪರಿಣಾಮ ಉಂಟಾಗುತ್ತದೆ. ಪಾತ್ರೆಗಳೂ ಹಾಳಾಗುತ್ತವೆ. ಆದರೆ ಪಾತ್ರೆ ತೊಳೆಯಲು ಲಿಕ್ವಿಡ್ ಹಾಗೂ ಸೋಪು ಬಳಸಬೇಕೆಂದಿಲ್ಲ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ಪಾತ್ರೆಗಳನ್ನು ಕ್ಲೀನ್ ಮಾಡಬಹುದು. ಅದು ಹೇಗೆ ಅಂತೀರಾ?
ಪಾತ್ರೆಗಳಲ್ಲಿ ತುಂಬಾ ಜಿಗುಟು ಅಂಟಿರುತ್ತಿದ್ದರೆ ಪಾತ್ರೆಯ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ, ಒಂದೈದು ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಸ್ಪಂಜ್ ಮೂಲಕ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ .ಪಾತ್ರೆ ಹೊಸದರಂತೆ ಹೊಳೆಯುತ್ತದೆ.
ಅಡುಗೆ ಮಾಡಲು ಕಟ್ಟಿಗೆ ಒಲೆ ಬಳಸುತ್ತಿದ್ದರೆ, ಕಟ್ಟಿಗೆ ಉರಿದ ಬೂದಿಯಿಂದಲೂ ಪಾತ್ರೆಯನ್ನು ತಿಕ್ಕಬಹುದು. ಇದರಿಂದ ಪಾತ್ರೆ ಶುಭ್ರವಾಗುತ್ತದೆ. ಅಡುಗೆ ಮನೆಯಲ್ಲಿ ಲಭ್ಯವಿರುವ ಉಪ್ಪು, ಲಿಂಬೆ ರಸವನ್ನು ಮಿಶ್ರಮಾಡಿ ಆ ಮಿಶ್ರಣದಿಂದ ಪಾತ್ರೆಗಳನ್ನು ತಿಕ್ಕಿದರೆ ಪಾತ್ರೆಯಲ್ಲಿರುವ ಕೊಳೆ ಮಾಯವಾಗಿ ಹೊಳಪು ಬರುತ್ತದೆ. ಅನ್ನಕ್ಕೆ ಇಡಲು ಅಕ್ಕಿಯನ್ನು ತೊಳೆಯುತ್ತೇವೆ ಅಲ್ಲವೇ. ಆ ಅಕ್ಕಿಯ ನೀರನ್ನು ಹಾಗೇ ಇಟ್ಟು ತೊಳೆಯುವ ಪಾತ್ರೆಗಳನ್ನು ಅದೇ ನೀರಿನಲ್ಲಿ ನೆನೆಸಿಡಿ. ನಂತರ ಸ್ಕ್ರಬ್ ಮಾಡಿ ನೀರಿನಲ್ಲಿ ತೊಳೆಯಿರಿ. ಪಾತ್ರೆ ಶುಭ್ರವಾಗುತ್ತವೆ.