ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು​ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿ, ವಿಶ್ವ ದಾಖಲೆ ಬರೆದಿದ್ದಾಳೆ.

ದಕ್ಷಿಣ ಆಫ್ರಿಕಾದ ಗೌಟೆಂಗ್ ನಿವಾಸಿ ಗೋಸಿಯಾಮ್ ತಾಮರಾ ಸಿತೋಲ್ (37) ಎಂಬ ಮಹಿಳೆ ಗರ್ಭದಿಂದ ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳನ್ನು ಸಿಜರಿಯನ್ ಆಪರೇಷನ್ ಮಾಡಿ ತೆಗೆಯಲಾಗಿದೆ. ಮೊದಲೇ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆ ಇದೀಗ 12 ಮಕ್ಕಳ ತಾಯಿಯಾಗಿದ್ದಾಳೆ.

ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಗೋಸಿಯಾಮ್ ಪತಿ ಟೆಬೊಹೊ ತಿಳಿಸಿದ್ದಾರೆ. ಈ ಕುರಿತು ಟೆಬೊಹೊ ಟ್ವೀಟ್ ಮಾಡಿದ್ದು, ನಮಗೆ ಮೂವರು ಮಕ್ಕಳು ಹುಟ್ಟ ಬಹುದೆಂದುಕೊಂಡಿದ್ದೆವು. ಆದರೆ 10 ಮಕ್ಕಳು ಹುಟ್ಟಿವೆ. ಗೋಸಿಯಾಮ್‌ಗೆ ಏಳು ತಿಂಗಳಾಗಿ ಏಳು ದಿನಗಳಾಗಿದ್ದವು.ಯಾವುದೇ ತೊಂದರೆಯಿಲ್ಲದೇ ಮಕ್ಕಳು ಜನಿಸಿದವು ಎಂದು ಸಂತಸ ಹಂಚಿಕೊಂಡಿದ್ದಾರೆ.

ಮೊರೊಕ್ಕಾದ ಮಲಿಯಾನ್ ಹಲೀಮಾ ಸಿಸ್ಸೆ ಎಂಬ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ  ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 10 ಮಕ್ಕಳಿಗೆ ಜನ್ಮ ನೀಡಿ ಆ ದಾಖಲೆಯನ್ನು ಗೋಸಿಯಾಮ್ ಮುರಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss