ಲಯೊನೆಲ್ ಮೆಸ್ಸಿ ಕಾಣಲು ಕೇರಳದಿಂದ ಎಸ್‌ಯುವಿಯಲ್ಲಿ ಕತಾರ್‌ಗೆ ಏಕಾಂಗಿಯಾಗಿ ಹೊರಟಿದ್ದಾಳೆ ಈ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟಿನಾ ಆಟಗಾರ ಲಯೊನೆಲ್ ಮೆಸ್ಸಿ ಅವರನ್ನು ಕಾಣಲು ಕೇರಳದ ಐದು ಮಕ್ಕಳ ತಾಯಿಯೊಬ್ಬರು ಏಕಾಂಗಿಯಾಗಿ ತಮ್ಮ ಎಸ್‌ಯುವಿ ಕಾರಿನಲ್ಲಿಯೇ ಪ್ರಯಾಣಿಸಿ ಕತಾರ್ ಸಮೀಪಕ್ಕೆ ತಲುಪಿದ್ದಾರೆ!

ಕೇರಳದ ನಾಝಿ ನೌಶಿ ಎಂಬ ಮಹಿಳೆ ಅ.೧೫ರಂದು ಕೇರಳದಿಂದ ತಮ್ಮ ಕಾರಿನಲ್ಲಿ ಹೊರಟಿದ್ದರು. ಇದೀಗ ಅವರು ಸುರಕ್ಷಿತವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಮೆಸ್ಸಿ ಅಭಿಮಾನಿಯಾಗಿರುವ ನೌಶಿ ಅವರನ್ನು ಕಾಣಲು ಈ ಸಾಹಸ ಕೈಗೊಂಡಿದ್ದಾರೆ. ಅವರು ನನ್ನ ಅಚ್ಚುಮೆಚ್ಚಿನ ಆಟಗಾರ. ಸೌದಿ ಅರೇಬಿಯಾ ತಂಡದ ವಿರುದ್ದ ಅರ್ಜೆಂಟೀನಾ ಸೋತಿರುವುದು ತುಂಬಾ ಬೇಸರತಂಇದೆ. ಈ ತಂಡ ಮುಂದೆ ಉತ್ತಮ ಪ್ರದರ್ಶನ ನೀಡಲಿದೆ ಮತ್ತು ವಿಶ್ವಕಪ್ ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ ಎಂದು ನಾಝಿ ಹೇಳಿದ್ದಾರೆ.

ಏಕಾಂಗಿ ಹಾಗೂ ಸುದೀರ್ಘ ಪ್ರಯಾಣವಾದ್ದರಿಂದ ಕಾರನ್ನು ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಕಾರಿನಲ್ಲಿಯೇ ಅಡುಗೆ ಮನೆ, ಛಾವಣಿ ಮೇಲೆ ಟೆಂಟ್ ವ್ಯವಸ್ಥೆಯೂ ಇದೆ. ಜೊತೆಗೆ ತಮ್ಮ ವಾಹನಕ್ಕೆ ಊಲು ಎಂದು ಹೆಸರಿಟ್ಟುಕೊಂಡಿದ್ದಾರೆ. ಆಹಾರಕ್ಕೆ ಅಗತದ್ಯವಿರುವ ಅಕ್ಕಿ, ಮಸಾಲೆ ಸೇರಿದಂತೆ ಅವಶ್ಯಕ ಸಾಮಾಗ್ರಿಗಳನ್ನು ಕೂಡಾ ಅವರು ಕಾರಿನಲ್ಲಿ ಜೊತೆಗೇ ಕೊಂಡೊಯ್ದಿದ್ದಾರೆ.
ಇದೇ ಪ್ರವಾಸದಲ್ಲಿ ಅವರು ವಿವಿಧ ಕೊಲ್ಲಿ ರಾಷ್ಟ್ರಗಳಿಗೂ ಪ್ರವಾಸ ಮಾಡಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!