ಯೋಧರಿಗಾಗಿ 12,300 ಅಡಿ ಎತ್ತರಕ್ಕೆ ತೆರಳಿ ಯೋಗ ಕಲಿಸಿದ ಈ ಮಹಿಳೆಗೆ 78 ವರ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

12,300 ಅಡಿ ಎತ್ತರದಲ್ಲಿ ನಿಂತು ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದು ಒಂದು ಸಾಧನೆಯಾದರೆ ಅಲ್ಲಿಗೆ ತೆರಳಿ ಯೋಗ ಹೇಳಿಕೊಡುವುದೂ ಒಂದು ಸಾಧನೆ, ಅದು 78 ರ ಪ್ರಾಯದಲ್ಲಿ!

ಹಭದು, ಪದ್ಮಿನಿ ಜೋಗ್ ಅವರಿಗೆ 78 ವರ್ಷ. ಈ ವಯಸ್ಸಿನಲ್ಲಿಯೂ ತುಂಬಿದ ಉತ್ಸಾಹ. ಸೈನಿಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪದ್ಮಿನಿ ಅವರು ಅವರಿಗಾಗಿ 12,300 ಅಡಿ ಎತ್ತರಕ್ಕೆ ತೆರಳಿ ಪ್ರಾಣಾಯಾಮ ಹಾಗೂ ಯೋಗ ಹೇಳಿಕೊಟ್ಟಿದ್ದಾರೆ.

ನಾಗ್ಪುರದ ಪದ್ಮಿನಿ ಅವರು ಯೋಗವನ್ನೇ ಜೀವನವನ್ನಾಗಿಸಿಕೊಂಡವರು. ಸುಮಾರು 20 ವರ್ಷಗಳಿಂದ ಭದ್ರತಾ ಪಡೆ ಸಿಬ್ಬಂದಿಗೆ ಯೋಗ ಬೋಧಕರಾಗಿದ್ದಾರೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ 12,300 ಅಡಿ ಎತ್ತರದಲ್ಲಿರುವ ಔಟ್‌ಪೋಸ್ಟ್‌ಗಳಲ್ಲಿ ನಿಯೋಕಿಸಲಾದ ಸೈನಿಕರಿಗೆ ಯೋಗ ಕಲಿಸುತ್ತಿದ್ದಾರೆ.

ಸೈನಿಕರು ಮಾನಸಿಕ ಹಾಗೂ ದೈಹಿಕವಾಗಿ ಸಧೃಢವಾಗಿರಲು ಯೋಗ ಅತ್ಯಧಿಕ ಎನ್ನುತ್ತಾರೆ ಪದ್ಮಿನಿ. ಪದ್ಮಿನಿ ಅವರ ಪತಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರತಾಪ್ ಜೋಗ್ ಅವರೊಂದಿಗೆ ಪದ್ಮಿನಿ ದೇಶಾದ್ಯಂತ ಪ್ರಯಾಣಿಸುತ್ತಿದ್ದರು.

ಕರ್ನಲ್ ಪ್ರತಾಪ್ ಜೋಗ್ ಅವರು ಇಹಲೋಕ ತ್ಯಜಿಸಿದ ನಂತರ ಪದ್ಮಿನಿ ಸೈನಿಕರಿಗೆ ಯೋಗ ಕಲಿಸುವ ಮೂಲಕ ಪತಿಯ ದಾರಿಯನ್ನೇ ಆರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!